ರಾಯಚೂರು.ಪೊಲೀಸ್ ಕಾನ್ಸ್ಟಬಲ್ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ದೊಡ್ಡ ಬಸವರಾಜ ಒಂದು ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ಆದೇಶಿದ್ದಾರೆ.
ಮಸ್ಕಿ ತಾಲೂಕಿನ ಆಶಿಹಾಳ ತಾಂಡದ ನಿವಾಸಿ
ಮುರಳಿಕೃಷ್ಣ 2018ರಲ್ಲಿ ಮಸ್ಕಿ ಪಟ್ಟಣದಲ್ಲಿ ತಪಾಸಣೆ ನಡೆಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಬಸವರಾಜ, ಕಾನ್ಸ್ಟೇಬಲ್ ಎಚ್. ಬಸವರಾಜ ಎಂಬುವರಿಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ, ಎಳೆದಾಡಿ, ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ.
ಈ ಕುರಿತು ಮಸ್ಕಿ ಪೋಲಿಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು, ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ದೊಡ್ಡ ಬಸವರಾಜ ಅವರು 25 ಸಾವಿರ ದಂಡ, ಒಂದು ವರ್ಷ ಜೈಲು ಶಿಕ್ಷೆ ನೀಡಿ ಆದೇಶಿಸಿದ್ದಾರೆ.