ರಾಯಚೂರು,ಫೆ.೨೪- ಜಿಲ್ಲೆಯ ಲಿಂಗಸೂಗೂರು ತಹಸೀಲ್ ಕಚೇರಿ ಎಸ್ ಡಿಎ ಸರ್ಕಾರ ಯೋಜನೆಗಳ ಅನುದಾನ ದುರ್ಬಳಕೆ ಮಾಡಿರುವ ಆರೋಪ ಎದುರಿಸುತ್ತಿರುವ ಯಲ್ಲಪ್ಪ ಎಂಬಾತನನ್ಬು ಲಿಂಗಸೂಗುರು ಪೊಲೀಸರು ಕಲ್ಲುರ್ಗಿ ಜಿಲ್ಲೆಯ ಜೆವರ್ಗಿಯಲ್ಲಿ ಬಂಧಿಸಿದ್ದಾರೆ.
ಮುಜರಾಯಿ ದೇವಸ್ಥಾನಗಳ ಅರ್ಚಕ ರಿಗೆ ನೀಡುವ ಅನುದಾನ ಮತ್ತು ಪ್ರಕೃತಿ ವಿಕೋಪ ಪರಿಹಾರ ಹಣವನ್ನು ಪತ್ನಿ,ಪುತ್ರ,ಪುತ್ರಿಯರ ಬ್ಯಾಂಕ್ ಖಾತೆಗೆ ಜಮಾಮಾಡಿದ್ದ ಯಲ್ಲಪ್ಪನ ವಿರುದ್ದ ಲಿಂಗಸೂಗುರು ಠಾಣೆ ಯಲ್ಲಿ ತಹಸೀಲ್ದಾರ ಶಂಶಾಲಂ ಫೆ.೧೯ ರಂದು ದೂರು ದಾಖಲಿಸಿದ್ದರು.೧.೮೮ ಕೋಟಿ ಅನುದಾನ ದುರ್ಬಳಕೆ ಮಾಡಿಕೊಂಡ ಯಲ್ಲಪ್ಪ ತಲೆಮರೆಸಿಕೊಂಡಿದ್ದ. ಪುಂಡಲೀಕ ಪಟ್ಟೇದಾರ ನೆತೃತ್ವದ ತನಿಖಾ ತಂಡ ಆರೋಪಿಯನ್ನು ಬಂಧಿಸಿ ಲಿಂಗಸೂಗುರು ಗೆ ಕರೆತಂದಿದ್ದಾರೆ.
ಮತ್ತೊಂದು ಕಡೆ ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಳೆ ನೇತ್ರತ್ವದಲ್ಲಿ ತನಿಖೆ ನಡೆಯುತ್ತಿದೆ.