Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime News

ಪೊಲೀಸರ ಥಳಿತದಿಂದ ವ್ಯಕ್ತಿ ಮೃತಪಟ್ಟ ಪ್ರಕರಣ :ಸಿಐಡಿತನಿಖೆಗೆ: – ಐಜಿ ಲೋಕೇಶಕುಮಾರ

ಪೊಲೀಸರ ಥಳಿತದಿಂದ ವ್ಯಕ್ತಿ ಮೃತಪಟ್ಟ ಪ್ರಕರಣ  :ಸಿಐಡಿತನಿಖೆಗೆ: – ಐಜಿ ಲೋಕೇಶಕುಮಾರ

ರಾಯಚೂರು,- ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೋರ್ವ ಪೊಲೀಸರ ಹಲ್ಲೆಯಿಂದ ಮೃತಪಟ್ಟ ಪ್ರಕರಣವನ್ನು ಸಿಐಡಿ ತನಿಖೆಗೆ ಶಿಫಾರಸ್ಸು ಮಾಡಲಾಗಿದ್ದು ಗುರುವಾರದಿಂದ ಸಿಐಡಿ ತನಿಖೆ ಪ್ರಾರಂಭವಾಗಲಿದೆ ಎಂದು ಬಳ್ಳಾರಿ ವಲಯದ ಪೊಲೀಸ ಮಹಾನಿರ್ದೇಶಕ ಬಿ.ಎಸ್.ಲೋಕೇಶ ಹೇಳಿದರು.ಅವರಿಂದು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ ಈಶ್ವರ ನಗರದ ನಿವಾಸಿ ವಿರೇಶ ಮತ್ತು ಪತ್ನಿ ನರಸಮ್ಮ ಮಧ್ಯೆ ನಡೆದ ಜಗಳ ಕುರಿತಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ವಿಚಾರಣೆ ನಡೆಸಿ ಆರೋಪಿಯನ್ನು ಬಿಡುಗಡೆಗೊಳಿಸಲಾಗಿತ್ತು. ಪುನಃ ೧೧೨ ಕರೆ ಮಾಡಿ ಜಗಳ ನಡೆಯುತ್ತಿರುವದೂರಿನಮೇರೆಗೆ ಪಶ್ಚಿಮ ಠಾಣೆಯ ಪೊಲೀಸರು ಕರೆತಂದು ವಿಚಾರಣೆ ನಡೆಸಿದ್ದರು. ಸಿಪಿಐ ನಾಗರಾಜ ಮೇಕಾ ಮತ್ತುಪಿಎಸ್‌ಐ ಮಂಜುನಾತ ಇವರು ಹಲ್ಲೆ ಮಾಡಿದ್ದರಿಂದ ವಿರೇಶ ಮೃತಪಟ್ಟಿರುವ ದೂರು ದಾಖಲಾಗಿದ್ದರಿಂದ ನಿಷ್ಪಕ್ಷಪಾತ ತನಿಖೆಗೆಅಡ್ಡಿಯಾಗದಂತೆ ಇಬ್ಬರನ್ನುಸೇವೆಯಿಂದ ಅಮಾನತ್‌ಗೊಳಿಸಲಾಗಿದೆ. ಡಿವೈಎಸ್‌ಪಿ ನೇತೃತ್ವದಲ್ಲಿತನಿಖೆಗೆ ಸೂಚಿಸಲಾಗಿದೆ.ಪ್ರಕರಣವನ್ನು ಸಿಐಡಿಗೆ ಶಿಫಾರಸ್ಸು ಮಾಡಿದ್ದರಿಂದ ತನಿಖೆಯನ್ನು ಸಿಐಡಿ ತಂಡ ತನಿಖೆ ಮುಂದುವರೆಸಲಿದೆ. ತನಿಖಾವರದಿ ಆಧಾರ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ತುರ್ವಿಹಾಳ ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿಮಾರಾಕಾಸ್ತ್ರಗಳನ್ನು ಹಿಡಿದು ಮೊಲಗಳನ್ನು ಬೇಟೆಯಾಡಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಅರಣ್ಯ ಇಲಾಖೆಯವರು ದೂರುದಾಖಲಿಸಿಕೊಂಡಿದ್ದಾರೆ. ವನ್ಯಜೀವಿಸಂರಕ್ಷನಾ ಕಾಯ್ದೆಯಡಿ ದೂರು ದಾಖಲಾಗಿ ತನಿಖೆ ನಡೆಯುತ್ತಿದೆ. ಮಾರಾಕಾಸ್ತ್ರ ಗಳನ್ನು ಹಿಡಿದು ಮೆರವಣಿಗೆ ಮಾಡಿರುವ ವಿಡಿಯೋವೈರಲ್ ಆಗಿರುವದು ಗಮನಕ್ಕೆ ಬಂದಿದ್ದು ದೂರು ದಾಖಲಿಸುವಕುರಿತು ಕ್ರಮ ವಹಿಸಲಾಗುತ್ತಿದೆ ಎಂದರು. ಅರಣ್ಯ ಇಲಾಖೆಯವರೇ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುತ್ತಾರೆ ಎಂದರು.
ಸೈಬರ್ ಕ್ರೈಮ್ ಅಪರಾಧಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿಎಲ್ಲಾಜಿಲ್ಲಾಕೇಂದ್ರಗಳಲ್ಲಿ ಸಿಇಎನ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಡಿವೈಎಸ್‌ಪಿ ಮಟ್ಟದ ಅಧಿಕಾರಿಗಳನ್ನು ನಿಯುಕ್ತಿಗೊಳಿಸಿ ಎರಡು ಹಂತದ ತರಬೇತಿ ನೀಡಲಾಗುತ್ತಿದೆ. ಸಾರ್ವಜನಿಕರು ವಂಚನೆಗೊಳಗಾದೇ ಎಚ್ಚರವಹಿಸಬೇಕಿದೆ.೧೯೩೦ ಕ್ಕೂ ದೂರು ನೀಡಬೇಕೆಂದರು. ಬಳ್ಳಾರಿ ವಿಭಾಗದಲ್ಲಿ ಪಿಎಸ್‌ಐ ಮತ್ತು ಪೇದೆಗಳ ಖಾಲಿ ಹುದ್ದೆಗಳ ಸಂಖ್ಯೆಇಳಿಕೆಯಾಗಿದೆ. ಶೀಘ್ರದಲ್ಲಿ ೫೧ ಪಿಐಹುದ್ದೆಗಳು ನಿಯುಕ್ತಿಗೊಳಿಸಲಾಗುತ್ತದೆ. ಎಎಸ್‌ಐಗಳನ್ನು ಪಿಎಸ್‌ಐಗಳಾಗಿ ಬಡ್ತಿಯನ್ನುಸಹ ನೀಡಲಾಗಿದೆಎಂದರು. ಈಸಂದರ್ಬದಲ್ಲಿ ಎಸ್‌ಪಿ ಪುಟ್ಟಮಾದಯ್ಯ ಇದ್ದರು.

Megha News