Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಟ್ರಾಕ್ಟರ್‌ನ ಹಗ್ಗ ಲಾರಿಗೆ ಸಿಕ್ಕಿ ಟ್ರಾಕ್ಟರ್ ರಸ್ತೆಯಲ್ಲಿ ಪಲ್ಟಿ ಚೆಲ್ಲಾಪಲ್ಲಿಯಾದ ಹತ್ತಿ

ಟ್ರಾಕ್ಟರ್‌ನ ಹಗ್ಗ ಲಾರಿಗೆ ಸಿಕ್ಕಿ ಟ್ರಾಕ್ಟರ್ ರಸ್ತೆಯಲ್ಲಿ ಪಲ್ಟಿ ಚೆಲ್ಲಾಪಲ್ಲಿಯಾದ ಹತ್ತಿ

ರಾಯಚೂರು. ಹತ್ತಿ ಸಾಗಿಸುತ್ತಿದ್ದ ಟ್ರಾಕ್ಟರ್‌ನ ಹಗ್ಗ ಲಾರಿಗೆ ಸಿಕ್ಕಿ ಹಾಕಿಕೊಂಡು ಟ್ರಾಕ್ಟರ್ ರಸ್ತೆಯಲ್ಲಿ ಪಲ್ಟಿಯಾಗಿರುವ ಘಟನೆ ನಡೆದಿದೆ.

ನಗರದ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದೆ, ಹತ್ತಿ ತುಂಬಿಕೊಂಡು ಹತ್ತಿ ಮಾರುಕಟ್ಟೆಗೆ ಹೋಗುತ್ತಿದ್ದ ಟ್ರಾಕ್ಟರ್‌‌‌ಗೆ ಎದುರು ಬರುತ್ತಿರುವ ಲಾರಿಯ ಸೈಡ್ ಹೋಗುತಿರುವಾಗ ಲಾರಿಯ ಕೊಂಡಿಗೆ ಟ್ರಾಕ್ಟರ್‌ಗೆ ಕಟ್ಟಿದ್ದ ಹಗ್ಗ ಸಿಲುಕಿಗೆ ಇದನ್ನು ಗಮನಿಸದೇ ಲಾರಿ ಮುಂದೆ ಚಲಿಸಿದೆ ಇದರಿಂದಾಗಿ ಟ್ರಾಕ್ಟರ್ ನಡು ರಸ್ತೆಯಲ್ಲಿ ಉರುಳಿ ಬಿದ್ದಿದೆ, ಇದರಿಂದ ರಸ್ತೆಯಲ್ಲಿ ಹತ್ತಿ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದೆ.
ನಡು ರಸ್ತೆಯಲ್ಲಿ ಘಟನೆ ನಡೆದಿದ್ದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸಂಚಾರಿ ಪೋಲಿಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಈ ಕುರಿತು ಸಂಚಾರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Megha News