Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಜೋಳದ ಬೆಳೆಗೆ ಲದ್ದಿ ಹುಳು ಕಾಟ, ಹತೋಟಿಗೆ ಬಾರದೆ ಸಂಕಷ್ಟದಲ್ಲಿ ಜೋಳ ಬೆಳೆದ ರೈತ

ಜೋಳದ ಬೆಳೆಗೆ ಲದ್ದಿ ಹುಳು ಕಾಟ, ಹತೋಟಿಗೆ ಬಾರದೆ ಸಂಕಷ್ಟದಲ್ಲಿ ಜೋಳ ಬೆಳೆದ ರೈತ

ರಾಯಚೂರು. ಜಿಲ್ಲೆಯಾದ್ಯಂತ ರೈತರು ಜೋಳ ಬೆಳೆ ಬೆಳೆದಿದ್ದು, ಬೆಳೆ ಉತ್ತಮವಾಗಿದೆ, ಮಾರು ಕಟ್ಟೆಯಲ್ಲಿ ಜೋಳಕ್ಕೆ ಹೆಚ್ಚಿನದ ದರವಿದ್ದು ರೈತ ಸಂತಸದಲ್ಲಿದ್ದಾನೆ, ಆದರೆ ಆರಂಭದಲ್ಲೆ

ಜೋಳದ ಬೆಳೆಗೆ ಲದ್ದಿ ಹುಳು ಕಾಟ ಹೆಚ್ಚಾಗಿದ್ದು, ರೈತರು ಇದೀಗ ಕಂಗಲಾಗಿದ್ದಾನೆ.
ರಾಯಚೂರು ತಾಲೂಕಿನ ಕಲ್ಮಲಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮನ್ಸಲಾಪೂರ, ಮರ್ಚೆ ಡ್, ಹೊಸಪೇಟೆ, ಜಾಗೀರ ವೆಂಕಟಾಪೂರ, ಪತ್ತೆಪೂರ ಸೇರಿದಂತೆ ತಾಲೂಕಾದ್ಯಂತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಬಾರಿ ಜೋಳ ಬಿತ್ತನೆ ಮಾಡಿದ್ದಾರೆ‌.
ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಕೃಷಿ ಇಲಾ ಖೆಯ ಮಾಹಿತಿ ಪ್ರಕಾರ 91 ಸಾವಿರ ಹೆಕ್ಟೇ ರ್‌ ಜೋಳ ಬಿತ್ತನೆ ಗುರಿ ಹೊಂದಿದ್ದರೂ, 71,019 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.
ಜೋಳ ಬಿತ್ತನೆ ಮಾಡಿದ ನಂತರ ಆರಂಭದಲ್ಲಿ
ಜೋಳದ ದಂಟಿನ ಮಧ್ಯೆ ಭಾಗದಲ್ಲಿ ಲದ್ದಿ ಹುಳು ಮೊಟ್ಟೆ ಇಡುತ್ತದೆ, ಮೊಟ್ಟೆಯಿಂದ ಬಂದ ಹುಳು ಜೋಳದ ಸುಳಿಯಲ್ಲಿ ಕತ್ತರಿಸಿ ಹಾಕುತ್ತದೆ. ಇದ ರಿಂದ ಬೆಳವಣಿಗೆ ಕುಂಠಿತವಾಗುತ್ತದೆ. ಜೋಳದ ಗಿಡ ತೆನೆ ಕಟ್ಟುವುದಿಲ್ಲ. ಜೋಳದ ಗಿಡವನ್ನು ಆರಂಭದಲ್ಲಿ ಬೆಳೆಯದಂತೆ ಮಾಡುತ್ತಿದೆ, ಇದ ರಿಂದ ರೈತರು ಸಾಕಷ್ಟು ಸಮಸ್ಯೆಯನ್ನು ಎದುರಿ ಸುವಂತಾಗಿದೆ. ಲದ್ದಿ ಹುಳು ಕಾಟ ತಪ್ಪಿಸಲು ರೈತರು ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದು ಹತೋಟಿಗೆ ಬರುತ್ತಿಲ್ಲವೆಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಮುಂಗಾರಿನಲ್ಲಿ ಮಳೆಯಾಗದೇ ಇರುವುದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದು, ಹಿಂಗಾರು ಬೆಳೆಗೆ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದು, ಮಳೆಯಲ್ಲದೆ ಇರುವುದರಿಂದ ರೈತರು ಹತ್ತಿರದ ಕೆರೆಯ ಮೂಲಕ ಪಂಪ್ ಸೆಟ್‌ನಿಂದ ನೀರು ಹರಿಸಿಕೊಳ್ಳುತ್ತಿದ್ದಾರೆ, ಆದರೆ ಬೆಳೆಗೆ ಲದ್ದಿ ಹುಳು ಕಾಟದಿಂದ ಕಂಗಲಾಗಿದ್ದು ದಿಕ್ಕು ತೋಚದಂತಾಗಿದೆ.
ಇತ್ತ ಮಳೆ ಕೈ ಕೊಟ್ಟಿದ್ದು, ಅತ್ತ ಬೆಳೆಯೂ ಕೈ ತಪ್ಪುವ ಆತಂಕದಲ್ಲಿದ್ದಾರೆ‌. ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಧಾವಿಸಿ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ರೈತರು.
ಜೋಳದ ಬೆಳೆಗೆ ಲದ್ದಿ ಹುಳು ಕೀಟದಿಂದ ಯಾವ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು ಎನ್ನುವ ಮಾಹಿತಿ ಕೊರತೆ ಇದೆ, ಕ್ರಿಮಿನಾಶಕ ಸಿಂಡಿಸಿ ದರೂ ಹತೋಟಿಗೆ ಬಂದಿಲ್ಲ, ರೈತರು ಲದ್ದಿ ಹುಳು ಕಾಟ ತಪ್ಪಿಸಲು ಹತೋಟಿಗೆ ಬರುವ ಕ್ರಿಮಿನಾಶಕ ಸಿಂಪಡಣೆ ಮಾಡಬೇಕಾಗಿದೆ, ಈ ಬಗ್ಗೆ ಕೃಷಿ ಇಲಾಖೆ ರೈತ ಸಂಪರ್ಕ ಇಲಾಖೆಯು ರೈತರಿಗೆ ಮಾಹಿತಿ ನೀಡಬೇಕಾಗಿದೆ.
————
ಜೋಳ ಉತ್ತಮವಾಗಿ ಬೆಳೆದಿದ್ದು, ಲದ್ದಿ ಹುಳು ಕಾಟ ಹೆಚ್ಚಿದೆ, ಕ್ರಿಮಿನಾಶಕ ಸಿಂಪಡಿಸಿದರೂ ಹತೋಟಗಿದೆ ಬಂದಿಲ್ಲ, ಈ ಬಗ್ಗೆ ಕೃಷಿ ಇಲಾಖೆ ಜೋಳ ಬೆಳೆದ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು, ಹತೋಟಿಗೆ ಬರುವ ಕ್ರಿಮಿನಾಶಕ ಮಾಹಿತಿ ನೀಡಬೇಕು
* ನಾಗಸ್ವಾಮಿ ರೈತ *

Megha News