Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಸಕಾಲ ಗೌರವಗಳಿಂದ ನಡೆದ ಹುತಾತ್ಮ ಯೋಧನ ಅಂತ್ಯ ಸಂಸ್ಕಾರ

ಸಕಾಲ ಗೌರವಗಳಿಂದ ನಡೆದ ಹುತಾತ್ಮ ಯೋಧನ ಅಂತ್ಯ ಸಂಸ್ಕಾರ

ಮಾನ್ವಿ:ಪಟ್ಟಣದ ಆರ್.ಜಿ.ಕ್ಯಾಂಪ್‌ನ ನಿವಾಸಿ ಹಾಗೂ ತಮಿಳುನಾಡಿನ ಕಲ್ಪಕಂ ಪರಮಾಣು ವಿದ್ಯುತ್ ತಯಾರಿಕ ಕೇಂದ್ರದಲ್ಲಿ ರಕ್ಷಣೆಯ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ತಮ್ಮ ರಾತ್ರಿಪಾಳಿ ಕೇಲಸವನ್ನು ಮುಗಿಸಿ ಮನೆಗೆ ಹಿಂತಿರುಗುವಾಗ ಆಕಸ್ಮಿಕವಾಗಿ ಕೈಯಲಿರುವ ಬಂದೂಕಿನಿAದ ಗುಂಡು ಹಾರಿ ಮೃತಪಟ್ಟಿರುವ ಕೈಗಾರಿಕಾ ಭದ್ರತಾ ಪಡೆಯ ಹುತಾತ್ಮ ಯೋಧ ಹಾಗೂ ಹೆಡ್ ಕಾನ್ಸ್ಟೆಬಲ್ ವೈ.ರವಿಕಿರಣ್ . ವ.37 ರವರ ಮೃತ ದೇಹವನ್ನು ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್ಸೆಪೆಕ್ಟರ್ ಅಂಕಿತ ಭಟಸಾಲ ನೇತೃತ್ವದ ಯೋಧರ ತಂಡ ಕುಟುಂಬಸ್ಥರಿಗೆ ಒಪ್ಪಿಸಿ ಗೌರವ ವಂದನೆ ಸಲ್ಲಿಸಿದರು.

ತಾಲೂಕು ಆಡಳಿತ ಹಾಗೂ ಕುಟುಂಬಸ್ಥರು ಹುತಾತ್ಮ ಯೋಧ ವೈ.ರವಿಕಿರಣ್ ಮೃತ ದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದರು ನೂರಾರು ಯುವಕರು ಬೈಕ್ ರ‍್ಯಾಲಿ ಮೂಲಕ ಮೃತದೇಹವನ್ನು ಕರೆತರಲಾಯಿತು. ತಾಲೂಕು ಆಡಳಿತದ ಪರವಾಗಿ ಶಾಸಕ ಹಂಪಯ್ಯನಾಯಕ ಹಾಗೂ ಗ್ರೇಡ್-2 ತಹಸೀಲ್ದರ್ ಅಬ್ದುಲ್ ವಾಹಿದ್, ಪಿ.ಐ.ವೀರಭದ್ರಯ್ಯ ಹಿರೇಮಠ ಹೂವಿನ ಹಾರವನ್ನು ಹಾಕಿ ಗೌರವ ಸಲ್ಲಿಸಿದರು.
ನಂತರ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ್,ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ವಿ.ಚನ್ನರೆಡ್ಡಿ, ಮಾಜಿ ಯೋಧರಾದ ಜಲ್ಲಿ ಆಂಜನೇಯ್ಯ, ಹಾಲಿ ಯೋಧರಾದ ದುರ್ಗಪ್ರಸಾದ್, ಶರಣಬಸವ, ವಂದೆ ಮಾತರಂ ಸಂಘದ ಅಧ್ಯಕ್ಷರಾದ ಮೆಹಬೂಬ್ ಮದ್ಲಾಪೂರ್ ಸೇರಿದಂತೆ ಕುಟುಂಬದವರು ಹಾಗೂ ನೂರಾರು ಅಭಿಮಾನಿಗಳು ಗೌರವ ಸಲ್ಲಿಸಿದರು .
ಕುಟುಂಬದವರ ಸ್ವಂತ ಜಮೀನಿನಲ್ಲಿ ಅಂತ್ಯ ಕ್ರೀಯೆ ನಡೆಯಿತು. ಸಿ.ಐ.ಎಸ್.ಎಫ್. ಸಬ್ ಇನ್ಸೆಪೆಕ್ಟರ್ ಅಂಕಿತ ಭಟಸಾಲ ನೇತೃತ್ವದಲ್ಲಿ ಯೋಧರಾದ ಸಂತೋಷಕುಮಾರ್, ಭರತಕುಮಾರ್,ಭೂಜರಾಜ ಶರ್ಮ,ಕೆ.ಕೆ.ನಗರವಾಲ್ ಹಾಗೂ ರಾಯಚೂರಿನ ಆರ್.ಟಿ.ಪಿ.ಎಸ್. ಸಿ.ಐ.ಎಸ್.ಎಫ್. ಸಬ್ ಇನ್ಸೆಪೆಕ್ಟರ್‌ಎಸ್.ಖಾಜವಾಲಿ ಹೆಡ್ ಕಾನ್ಸಟೆಬಲ್ ರವಿ.ಕುಪಲಿ ಈಶ್ವರರಾವ್, ಕೆ.ಡಿ.ವಾಗಮಾರೆ,ಮೌನೇಶ ಕುಮಾರ್,ದೀಪಾಕ್ ಮಹಮ್ಮದ್, ಸಿ.ಐ.ಎಸ್.ಎಫ್. ಸಂಪ್ರದಾಯದಂತೆ ಯೋಧರು ಗೌರವ ವಂದನೆ ಸಲ್ಲಿಸಿದರು.
ಮನೆಯ ಅವರಣದಲ್ಲಿ ಅಂತಿಮ ದರ್ಶನ ಸಮಯದಲ್ಲಿ ಹುತಾತ್ಮ ಯೋಧನ ಪತ್ನಿ ಅನುಷ, ಇಬ್ಬರು ಪುತ್ರಿಯರಾದ ಯಶಸ್ವಿನಿ,ರಿತಿಕಾ , ತಂದೆ ವೈ .ಅಬ್ಬುಲು.ತಾಯಿ ವೈ.ವರಲಕ್ಷಿö್ಮ, ಸಹೋದರ ಮುರಳಿ ರವರು ರೋಧಿಸುತ್ತಿರುವ ದೃಶ್ಯ ಮನಕಲಕುವಂತೆ ಇತ್ತು.
ಹುತಾತ್ಮ ಯೋಧನ ಮಾವ ಕಾಮೇಶ್ವರರಾವ್ ಮಾತನಾಡಿ ಮದುವೆಯಾಗಿ ಹತ್ತು ವರ್ಷವಾಗಿದರಿಂದ ಮದುವೆಯ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎನ್ನುವ ಉದ್ದೇಶದಿಂದ ಮಗಳು ಹಾಗೂ ಮೋಮ್ಮಕಳು ಪಟ್ಟಣಕ್ಕೆ ಬಂದಿದ್ದರು ರಜೆಗಾಗಿ ಅಳಿಯ ಪ್ರಯತ್ನಿಸುತ್ತಿದ್ದ ಬಟ್ಟೆ,ಒಡವೆ ಸೇರಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡು ಅಳಿಯನಿಗಾಗಿ ಕಾಯುತ್ತಿದ್ದೆವು ಅದ್ದರೆ ಅಳಿಯ ಇಂದು ಮನೆಗೆ ಶವವಾಗಿ ಬಂದಿರುವುದು ಕುಟುಂಬದವರಿಗೆ ಅತ್ಯಂತ ದುಃಖವನ್ನುಂಟು ಮಾಡಿದೆ ಎಂದು ಸಂಬಂದಿಕರಲ್ಲಿ ಹೇಳಿಕೊಂಡು ರೋಧಿಸುತ್ತಿರುವುದು ಎಂತಹವರನ್ನಾದರು ಕರಗುವಂತೆ ಮಾಡುತ್ತಿತ್ತು.

 

Megha News