Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ರಾಜ್ಯದಲ್ಲಿ ಹುಕ್ಕಾಬಾರ್ ಸಂಪೂರ್ಣ ನಿಷೇಧ ಸರ್ಕಾರ ಆದೇಶ

ರಾಜ್ಯದಲ್ಲಿ ಹುಕ್ಕಾಬಾರ್ ಸಂಪೂರ್ಣ ನಿಷೇಧ ಸರ್ಕಾರ ಆದೇಶ

ಬೆಂಗಳೂರು: ರಾಜ್ಯದಲ್ಲಿ ನಿಕೋಟಿನ್ ರಹಿತ ತಂಬಾಕು ರಹಿತ, ಸ್ವಾಧಭರಿತ, ಸ್ವಾಧರಹಿತ ಹುಕ್ಕ ಮೊಲಾಸಸ್, ಶಿಶಾ ಹಾಗೂ ಇದೇ ಮಾದರಿಯ ಇನ್ನಿತರೆ ಹೆಸರುಗಳಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಪ್ರಚೋನೆ, ಸಂಗ್ರಹಣೆ, ವ್ಯಾಪಾರವನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸಿರುವ ಗ್ಲೋಬಲ್ ಅಡಲ್ ಟೊಬ್ಯಾಕೊ ಸರ್ವೇ 2016-17 ಅಧ್ಯಯನ ಪ್ರಕಾರ, ಕರ್ನಾಟಕದಲ್ಲಿ 22.8% ವಯಸ್ಕರು (15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಒಂದಲ್ಲ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಪೈಕಿ ಶೇ.8.8 ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ 23.9% ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ವರೋಕ್ತ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ.
ಭಾರತದಲ್ಲಿ ತಂಬಾಕು ಉತ್ಪನ್ನಗಳ ಸೇವನೆ, ಮಾರಾಟ, ಜಾಹೀರಾತು, ಸಂಗ್ರಹಣೆ, ವಾಣಿಜ್ಯ ಮಹಾರ, ಉತ್ಪಾದನೆ, ಹಂಚಿಕೆ ಇವುಗಳನ್ನು ಸಿಗರೇಟ್ ಅಂಡ್ ಟೊಬ್ಯಾಕೋ ಪ್ರಾಡಕ್ಟ್ ಆಕ್ಟ್ (COTPA) 2003 ರಲ್ಲಿ ನಿಯಂತ್ರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಧಯನಗಳ ಪುಕಾರ, 45 ನಿಮಿಷಗಳ ಹುಕ್ಕಾ ಸೇವನ, 100 ಸಿಗರೇಟ್ ಸೇದುವುದಕ್ಕೆ ಸಮನಾಗಿರುತ್ತದೆ ಹಾಗೂ ಆರೋಗ್ಯಕ್ಕೆ ಮಾರಕ ಎಂದು ಉಲ್ಲೇಖಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಹುಕ್ಕಾ ಒಂದು ವ್ಯಸನಕಾರಿ ವಸ್ತುವಾಗಿದ್ದು, ಅದರಲ್ಲಿರುವ ನಿಕೋಟಿನ್ ಅಥವಾ ತಂಬಾಕು ಹಾಗೂ ಮೊಲಾಸಸ್ ಅಥವಾ ಸುವಾಸನಭರಿತ ಪದಾರ್ಥಗಳಲ್ಲಿ ಹಚ್ಚಿನ ಪುಮಾಣದಲ್ಲಿ ಕಾರ್ಬನ್ ಮಾನಾಕ್ಸೆಡ್ ರಾಸಾಯನಿಕ ವಸ್ತುವನ್ನು ಒಳಗೊಂಡಿದ್ದು ಆರೋಗ್ಯಕ್ಕೆ ಅತ್ಯಂತ ಮಾರಿಕ ಎಂದು ಎಚ್ಚರಿಸಿದ್ದಾರೆ.
COTPA 2003ರ ಕಾಯ್ದೆಯ ಕಲಂ 3(ಪಿ) ಶೆಡ್ಯೂಲ್‌ನಲ್ಲಿ ಹುಕ್ಕಾವನ್ನು ತಂಬಾಕು ಉತ್ಪನ್ನವೆಂದು ವರ್ಗೀಕರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿ ಸಮುದಾಯದವರು ತಂಬಾಕು ಸಹಿತ ಅಥವಾ ಹುಕ್ಕಾ ಮೊಲಾಸನ್ ಇತರ ಹೆಸರಿನಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವನೆಮಾಡಿ ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ ಎಂದು ಹೇಳಿದ್ದಾರೆ.
COTPA 2003 ಸೆಕ್ಷನ್ 4ರಡಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ ಮುಂದುವರಿದು, 30 ಹಾಗೂ ಮೂವತ್ತಕ್ಕಿಂತ ಹೆಚ್ಚು, ಆಸನ ವ್ಯವಸ್ಥೆ ಇರುವ ರೆಸ್ಟೋರೆಂಟ್, ಪಬ್‌ಗಳಲ್ಲಿ ನಿಗದಿಪಡಿಸಿದ ಪ್ರತ್ಯೇಕ ಧೂಮಪಾನ ವಲಯದಲ್ಲಿ ಮಾತ್ರ ಮಾಡಬಹುದಾಗಿರುತ್ತದೆ ಧೂಮಪಾನ ವಲಯ ಅಥವಾ ಕೊಠಡಿಯಲ್ಲಿ ಪ್ರಚೋದಿಸುವ ವಸ್ತುಗಳನ್ನು ಹಾಗೂ ಇತರ ಸೇವೆಗಳನ್ನು ನೀಡುವುದು COTPA 2003 ಕಾಯ್ದೆಯ ಸೆಕ್ಷನ್ 4ರ ಉಲ್ಲಂಘನೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
COTPA ಕಲಂ 6(a) ಮತ್ತು 6(b) ಪುಕಾರ, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಂಬಾಕು ಸೇವನ ಮಾಡುವಂತೆ ಪ್ರಚೋದಿಸುವುದು ಹಾಗೂ ಶೈಕ್ಷಣಿಕ ಸಂಸ್ಥೆಯ ನೂರು ಗಜದ ವ್ಯಾಪ್ತಿಯಲ್ಲಿ ಹುಕ್ಕಾ ಒಳಗೊಂಡಂತೆ ಇತರ ತಂಬಾಕು ವಸ್ತುಗಳ ಮಾರಾಟ/ಉವಯೋಗ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ 2015 ಸೆಕ್ಷನ್ 77ರ ಪುಕಾರ, ಅಪ್ರಾಪ್ತರಿಗೆ ತಂಬಾಕು ಅಥವಾ ಇತರೆ ಮಾದಕ ವಸ್ತುಗಳ ಸೇವನ ಬಗ್ಗೆ ವುಚೋದಿಸುವುದು ಹಾಗೂ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದಿದ್ದಾರೆ.
ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮ 2015 ರಡಿ ನಿಕೋಟಿನ್ ಅನ್ನು ವಿಷ ಅಥವಾ ಅಪಾಯಕಾರಿ ರಾಸಾಯನಿಕ ವಸ್ತುವಾಗಿ ವರ್ಗೀಕರಿಸಲಾಗಿದೆ. ಹುಕ್ಕಾವು ಮುಚ್ಚಿರುವ ಕೊಠಡಿಯಲ್ಲಿ ನಳಿಕೆ ಅಥವಾ ವೈಫ್ ಸಲಕರಣೆ ಮೂಲಕ ಬಾಯಿಯಿಂದ ಸೇವನೆ ಮಾಡುವ ಉತ್ಪನ್ನವಾಗಿರುತ್ತದೆ. ಇದರಿಂದ ಬಾಯಿ ಮೂಲಕ ಸಾಂಕ್ರಾಮಿಕ ಕಾಯಿಲೆಗಳಾದ ಹರ್ಪಿಸ್, ಕ್ಷಯರೋಗ, ಹೆಪಟೈಟಿಸ್, ಕೋವಿಡ್ 19 ಹಾಗೂ ಇತರ ಕಾಯಿಲೆಗಳು ಹರಡುವ ಆತಂಕವಿದೆ ಎಂದು ಹೇಳಿದ್ದಾರೆ.
ಹುಕ್ಕಾ ಬಾರ್ ವ್ಯವಸ್ಥೆಯು ರಾಜ್ಯ ಅಗ್ನಿ ಅನಾಹುತಗಳಿಗೆ ಕಾರಣವು ಮತ್ತು ರಾಜ್ಯ ಅಗ್ನಿ ನಿಯಂತ್ರಣ ಹಾಗೂ ಅಗ್ನಿ ಸುರಕ್ಷತೆ ಕಾಯ್ದೆ ಉಲ್ಲಂಘನೆ ಆಗುತ್ತದೆ. ಹುಕ್ಕಾ ಬಾರ್ ಗಳು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯಿದೆ 2006 ಹಾಗೂ 2.1.1 ಶೆಡ್ಯೂಲ್ 5ರ ನಿಬಂಧನೆಗಳ ಮೇರೆಗೆ ಪರವಾನಗಿ ಪಡೆದಿರುತ್ತವೆ. ಹೋಟೆಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಹುಕ್ಕಾ ಸೇವನೆ ಮಾಡುವುದರಿಂದ ಆಹಾರ ಪದಾರ್ಥಗಳು, ಸಾರ್ವಜನಿಕರ ಸೇವನೆಗೆ ಅಸುರಕ್ಷಿತವಾಗಿರುತ್ತದೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದಿದ್ದಾರೆ.
ಸಂವಿಧಾನದ 47ನೇ ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದಂತೆ, ಸಾರ್ವಜನಿಕರ ಆರೋಗ್ಯ ಕಾವಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿರುತ್ತದೆ. ಒಟ್ಟಾರೆಯಾಗಿ, ಹುಕ್ಕಾ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ನಿಕೋಟಿನ್ ರಹಿತ ತಂಬಾಕು ರಹಿತ ಸ್ವಾದಭರಿತ, ಸ್ವಾಧರಹಿತ ಹುಕ್ಕಾ ಮೊಲಾಸನ್, ಶಿಶಾ ಹಾಗೂ ಇದೇ ಮಾದರಿಯ ಇನ್ನಿತರ ಹೆಸರುಗಳಿಂದ ಕರೆಯಲ್ಪಡುವ ಹುಕ್ಕಾ ಉತನಗಳ ಮಾರಾಟ, ಸೇವನೆ, ಜಾಹೀರಾತು, ವುಚೋದನೆ, ಸಂಗ್ರಹಣೆ, ವ್ಯಾಪಾರವನ್ನು ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಖಡಕ್ ಆದೇಶ ಮಾಡಿದ್ದಾರೆ.
ಇದನ್ನು ಉಲ್ಲಂಘನೆ ಮಾಡಿದವರ ವಿರುದ್ಧ COTPA 2003, ಕಾಯ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದ 2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮ 2015 ಮತ್ತು ಭಾರತೀಯ ದಂಡಸಂಹಿತ ಮತ್ತು ಅ ನಿಯಂತ್ರಣ ಹಾಗೂ ಅಗ್ನಿ ಸುರಕ್ಷತೆ ಕಾಯಿದ ಪ್ರಕಾರ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.

Megha News