Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal News

ಪತ್ನಿಯನ್ನು ಕೊಂದ ಪತಿ ನೇಣಗೆ ಶರಣು

ಪತ್ನಿಯನ್ನು ಕೊಂದ ಪತಿ ನೇಣಗೆ ಶರಣು

ಮಾನವಿ.ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ರಾಜೋಳಿ ಗ್ರಾಮದಲ್ಲಿ ನಡೆದಿದೆ.

ಪತಿ ಖಾಸಿಂಮಪ್ಪ ತನ್ನ ಪತ್ನಿ ಅಂಭಮ್ಮ (31)ಳನ್ನು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಪತ್ನಿ ಮಲಗಿಕೊಂಡಿರುವ ಸಂದರ್ಭದಲ್ಲಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿ ಅಡವಿ ಖಾನಾಪುರ ಗ್ರಾಮದ ವ್ಯಾಪ್ತಿಯಲ್ಲಿನ ಜಮೀನುನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಪತಿ ಖಾಸಿಂಮಪ್ಪ ಮದ್ಯ ಸೇವಿಸಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಇಬ್ಬರು ಪರಸ್ಪರವಾಗಿ ಜಗಳವಾಗಿವಾಗಿದ್ದು, ಇದೀಗ ಇಬ್ಬರ ಸಾವಿನಿಂದ ಮಕ್ಕಳು ಅನಾಥರಾಗಿದ್ದಾರೆ.
ಸ್ಥಳಕ್ಕೆ ಪೊಲೀಸ್ ಠಾಣೆಯ ಪೊಲೀಸರು ಬೇಟಿ ನೀಡಿ ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತರ ಮನೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ ನಿಖಿಲ್ ಬೇಟಿ ನೀಡಿದ್ದಾರೆ‌.

Megha News