ರಾಯಚೂರು. ಚಲಿಸುತ್ತಿದ್ದ ಲಾರಿಯ ಟೈಯರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಹಣ್ಣಿನ ಅಂಗಡಿಗೆ ನುಗ್ಗಿದ ಘಟನೆ ಬೆಳಗಿನ ಜಾವದಲ್ಲಿ ನಡೆದಿದೆ.
ನಗರದ ಯರಮರಸ್ ಬೈಪಾಸ್ ಬಳಿ ಘಟನೆ ಸಂಬವಿಸಿದ್ದು, ಯಾರು ಇಲ್ಲದೇ ಇರುವುದರಿಂದ ಯಾವುದೇ ಪ್ರಾಣಾಪಾಮ ಆಗಿಲ್ಲ, ಬಾರಿ ಅನಾವುತ ತಪ್ಪಿದೆ.
ರಾಯಚೂರು ಕಡೆಯಿಂದ ಹೈದರಾಬಾದ್ ಮಾರ್ಗವಾಗಿ ತೆರಳುತ್ತಿದ್ದ ಲಾರಿಯ ಟೈಯರ್ ಬ್ಲಾಸ್ಟ್ ಆಗಿದೆ, ಈ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿದೆ, ರಸ್ತೆ ಬದಿಯಲ್ಲಿರುವ ಹಣ್ಣಿನ ಅಂಗಡಿಗೆ ನುಗ್ಗಿದೆ, ಅಂಗಡಿಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಬಂವಿಸಿಲ್ಲ.
ಸ್ಥಳಕ್ಕೆ ಗ್ರಾಮೀಣ ಪೋಲಿಸ್ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.