ರಾಯಚೂರು. ನಾಪತ್ತೆಯಾಗಿದ್ದ ಯುವಕನ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಾನ್ವಿ ತಾಲೂಕಿನ ನೀರಮಾನ್ವಿ ಸಮೀಪ ಮಿಟ್ಟಿ ಕ್ಯಾಂಪ್ ಬಳಿಯ ಹೊಲದಲ್ಲಿ ಪತ್ತೆಯಾಗಿದೆ.
ಮೃತ ಯುವಕ ಸುರೇಶ್ ನಾಯಕ್ (20) ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮೃತ ಸುರೇಶ ಮನೆಗೆ ಬಾರದೆ ನಾಪತ್ತೆಯಾಗಿದ್ದ,
ಕುಟುಂಬಸ್ಥರು ನಾಪತ್ತೆಯಾಗಿದ್ದ ದೂರು ದಾಖ ಲಿಸಿದ್ದರು, ಇದೀಗ ಸುರೇಶನ ದೇಹ ಸುಟ್ಟ ಸ್ಥಿತಿ ಯಲ್ಲಿ ಪತ್ತೆಯಾಗಿದೆ.
ಮೃತ ಸುರೇಶ ಮಾನ್ವಿ ಪಟ್ಟಣದ ನಿವಾಸಿಯಾಗಿ ದ್ದು, ಬೆಂಗಳೂರಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂ ಡಿದ್ದ ಎನ್ನಲಾಗಿದೆ, ನೀರ ಮಾನವಿ ಜಾತ್ರೆ ನಿಮಿತ್ತ ಊರಿಗೆ ಬಂದಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಮಾನವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸ್ ತನಿಖೆ ಮುಂದುವರೆಸಿದ್ದಾರೆ.