ರಾಯಚೂರು,ಜು.೧೫-ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿರುವ ಗ್ರಾಮೀಣ ಶಾಸಕರಾಗಿ ಒಂದೇ ವರ್ಷದಲ್ಲಿ ನೂರಾರು ಎಕರೆ ಭೂಮಿಯನ್ನು ಖರೀದಿಸಿರುವದು ಬಯಲಾಗಿದೆ.
ವಿಧಾನಸಭಾ ಚುನಾವಣೆ ನಂತರ ಅಧಿಕಾರ ಸ್ವೀಕರಿಸಿ ವರ್ಷದೊಳಗೆ ಇಷ್ಟೊಂದು ದೊಡ್ಡ ಮಟ್ಟದ ವ್ಯವಹಾರ ಹಣ ಮೂಲ ನಿಗಮವೇ ಎಂಬುದು ಜಿಜ್ಞಾಸೆ.!
ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಸನಗೌಡ ದದ್ದಲ ಅವರು ಪತ್ನಿ, ಪುತ್ರಿಯರು, ಸೊಸೆ ಸೇರಿದಂತೆ ಸಂಬAಧಿಗಳ ಹೆಸರಿನಲ್ಲಿ ಜಮೀನು ಖರೀದಿಸಿದ್ದು ಇನ್ನೂ ಬೆಳಕಿಗೆ ಬಾರದೇ ಇರುವ ಆದಾಯವೇಷ್ಟೋ ಎಂಬದು ಇನ್ನೂ ನಿಗೂಢ.
ಭೂ ಒಡೆಯ : ಸಾಮಾನ್ಯ ಕುಟುಂಬದಿAದ ಬಂದಿರುವ ಶಾಸಕ ದದ್ದಲ ಬಸನಗೌಡ ಎರಡನೇ ಅವಧಿಗೆ ಶಾಸಕನಾಗುತ್ತಲೇ ಅಧಿಕಾರಕ್ಕೆ ಕಾಂಗ್ರೆಸ್ ಬರುತ್ತಲೇ ದದ್ದಲ ಭವಿಷ್ಯವೇ ಬದಲಾಗಿರುವದು ಪತ್ತೆಯಾಗಿದೆ. ನೂರಾರು ಎಕರೆ ಭೂಮಿ ಖರೀದಿಸಲು ಅಡ್ಡ ದಾರಿಯಿಂದ ಹಣ ಮಾಡಿರುವದು ಅನುಮಾನಕ್ಕೆ ಅಕ್ರಮಹಣ ವರ್ಗಾವಣೆ ಆರೋಪ ಇಂಬು ನೀಡಿದಂತಾಗಿದೆ.
ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾಗಿಲ್ಲ ಎನ್ನುತ್ತಲೇ ೫೫ ಲಕ್ಷ ರೂ.ಗಳನ್ನು ಆಪ್ತ ಸಹಾಯಕ ಪಂಪಣ್ಣ ಇವರು ಶ್ಯಾಂಗ್ರಿಲಾ ಹೋಟೆಲ್‌ನಲ್ಲಿ ಪಡೆದಿದ್ದ ವಿಚಾರಣೆಗೆ ಇಡಿ ಅಧಿಕಾರಿಗಳು ಮಾಡುತ್ತಲೇ ಗೌಡ ಗತ್ತಿನ ಹಿಂದಿರುವ ಗಮ್ಮತ್ತು ಕಳಚಿಕೊಂಡಿದೆ. ಇಡಿ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡು ಅಲೆದಾಡುತ್ತಿರುವ ದದ್ದಲ್ ಬಸನಗೌಡರಿಗೆ ಕಂಟಕ ಆವರಿಸಿದೆ.
ವೈನ್ ಶಾಪ್‌ಗಳು ಬಂದವು : ಕಳೆದ ಬಾರಿ ಶಾಸಕರಾಗಿದ್ದಾಗ ಸದನದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಅಕ್ರಮ ಮಧ್ಯ ಸಾಗಾಣೆ ಕುರಿತು ಧ್ವನಿ ಎತ್ತಿ ಜನಪರ ಎಂದು ತೋರಿಸಿಕೊಂಡಿದ್ದರು. ಆದರೆ ಎರಡನೇ ಬಾರಿ ಶಾಸಕನಾಗಿ ತಿಂಗಳು ಕಳೆಯುಷ್ಟರಲ್ಲಿಯೇ ತಾವೇ ಬಾರ್‌ಗಳ ಮಾಲೀಕರಾಗಿದ್ದಾರೆ .! ಗಿಲ್ಲೇಸೂಗುರು, ಯರಗೇರಾ ಮಟಮಾರಿ ಬಾರುಗಳು ಎಂಎಲ್‌ಎ ಸಾಹೆಬ್ರುವಂತೆ.
ಟೆAಡರ್Àನಲ್ಲಿ ಎಂಎಲ್‌ಎ ಕೈ : ಆರ್‌ಟಿಪಿಎಸ್, ವೈಟಿಪಿಎಸ್ ಸೇರಿದಂತೆ ಟೆಂಡರ್ ಕಾಮಗಾರಿಗಳಲ್ಲಿಯೂ ಎಂಎಲ್‌ಎ ಕೈ ಆಡಿಸಿದ್ದಾರೆ ಎಂಬ ಅರೋಪ ಕೇಳಿಬಂದಿದೆ. ಸಾಮಾಜಿಕ ಹೊಣೆಗಾರಿP ೆ(ಸಿಎಸ್‌ಆರ್) ಅನುದಾನ ಕಾಮಗಾರಿಗಳು ತಮ್ಮ ಆಪ್ತವಲಯಕ್ಕೆ ನೀಡಿ ಕೆಲಸ ನಿರ್ವಹಿಸದೇ ಹಣ ತೆಗೆದುಕೊಂಡಿದ್ದಾರೆ. ಅನೇಕ ಕಾಮಗಾರಿಗಳ ಗುತ್ತಿಗೆ ನೀಡವದಕ್ಕೂ, ಕೊಡುವದಕ್ಕೂ ದದ್ದಲ ಅನುಮತಿ ಕಡ್ಡಾಯವಂತೆ. ಸಾಲು ಸಾಲು ಆರೋಪಗಳು ಕ್ಷೇತ್ರದ ತುಂಬಾ ಹರಡಿಕೊಂಡಿವೆ. ಅಧಿಕಾರ ಬಲದಿಂದ ತಪ್ಪಿಸಿಕೊಳ್ಳಬಹುದು ಎಂದು ಕೊಂಡಿದ್ದ ಬಸನಗೌಡ ದದ್ದಲ ಲೆಕ್ಕ ಕೊಡಬೇಕಿದೆ. ಅಧಿಕಾರ ಬಲ ಯಾವ ರೂಪಕ್ಕೆ ತಂದು ನಿಲ್ಲಿಸಿತ್ತೋ ಕಾಲವೇ ಉತ್ತರಿಸಬೇಕಿದೆ.
Megha News > Local News > ದದ್ದಲ ಕುಟುಂಬದ ಹೆಸರಿನಲ್ಲಿ ನೂರಾರು ಎಕರೆ ಭೂಮಿ ಖರೀದಿ..! ಭೂ ಮಾಲೀಕ, ಬಾರ್ ಒನರ್ ಆದ ಶಾಸಕ
ದದ್ದಲ ಕುಟುಂಬದ ಹೆಸರಿನಲ್ಲಿ ನೂರಾರು ಎಕರೆ ಭೂಮಿ ಖರೀದಿ..! ಭೂ ಮಾಲೀಕ, ಬಾರ್ ಒನರ್ ಆದ ಶಾಸಕ
Tayappa - Raichur15/07/2024
posted on
Leave a reply