ಹಟ್ಟಿ ಚಿನ್ನದ ಗಣಿ. ಕಳೆದ ಏಳು ವರ್ಷಗಳ ಹಿಂದೆ ಸ್ಧಗಿತ ಗೊಂಡಿದ್ದ ಮೆಡಿಕಲ್ ಅನ್ಪಿಟ್ ಯೋಜನೆಯನ್ನು ಇದೀಗ ಜಾರಿಯಾಗಿದ್ದು, ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಹರ್ಷ ಮನೆ ಮಾಡಿದೆ.
ಕಾರ್ಮಿಕರ 10 ವರ್ಷ ಸೇವಾವಧಿ ಪೂರೈಸುವ ಹಾಗೂ ಯಾವುದೇ ಸೇವಾವಧಿ ಬಾಕಿ ಮಿತಿ ಇಲ್ಲದೇ, ಸಿಬ್ಬಂದಿ ಹಾಗೂ ಕಾರ್ಮಿಕರು ವೈದ್ಯ ಕೀಯ ಚಿಕಿತ್ಸೆಗೆ ದಾಖಲೆಯೊಂದಿಗೆ ಅರ್ಜಿ ಸಲ್ಲಿ ಸಲು ಇದೀಗ ಗಣಿ ಕಂಪನಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ವೈದ್ಯಕೀಯವಾಗಿ ಅನರ್ಹಗೊಂಡ ಕಾರ್ಮಿಕರ ಅವಲಂಬಿತ ಕುಟುಂಬದ ಪುರುಷ ಕಾರ್ಮಿಕರಿಗೆ ಮಾತ್ರ ಜಿ-12 ದರ್ಜೆಯಲ್ಲಿ ಕಾರ್ಯ ನಿರ್ವಹಿ ಸಲು ಅವಕಾಶ ಕಲ್ಪಸಿಕೊಡಲಾಗಿದೆ. ಕಾರ್ಮಿ ಕರು ಷರತ್ತಿನಂತೆ ಉದ್ಯೋಗ ಪಡೆಯಲು ಕು ಟುಂಬದಲ್ಲಿ ಅರ್ಹರು ಇಲ್ಲದಿದ್ದರೆ 17 ಲಕ್ಷದ ವರಗೆ ಹಣಕಾಸಿನ ಪರಿಹಾರ ಪಡೆಯಬಹು ದಾಗಿದೆ. ಗಣಿ ಕಂಪನಿ ಆದೇಶ ಹೊರಡಿಸಿದೆ.