ಸಿಂಧನೂರು. ಕಾರಟಗಿ ರೈಲು ನಿಲ್ದಾಣದಿಂದ ಸಿಂಧನೂರು ನಗರದ ರೈಲು ನಿಲ್ದಾಣದವರೆಗೆ ಪರೀಕ್ಷಾರ್ಥ ರೈಲು ಸಂಚಾರವು ಯಶಸ್ವಿಯಾಗಿದೆ.
ಅಂದಾಜು 130 ಕಿ.ಮೀ ವೇಗದಲ್ಲಿ 3 ಬೋಗಿಗಳನ್ನು ಹೊಂದಿದ್ದ ರೈಲ್ವೆ ಎಂಜಿನ್‍ನ್ನು ಕಾರಟಗಿಯಿಂದ ಸಿಂಧನೂರುವರೆಗೆ ಎರಡು ಬಾರಿ ಪರೀಕ್ಷಾರ್ಥ ಸಂಚಾರ ನಡೆಸಲಾಯಿತು.
ಈ ವೇಳೆ ರೈಲ್ವೆ ಇಲಾಖೆಯ ಅಧಿಕಾರಿಗಳು ಟ್ರ್ಯಾಕ್ ಸೇರಿದಂತೆ ಮತ್ತಿತರ ಕಾಮಗಾರಿಗಳ ಭದ್ರತೆಯನ್ನು ಪರಿಶೀಲಿಸಿದರು.
ಜೊತೆಗೆ ಕಾರಟಗಿಯಿಂದ ಸಿಂಧನೂರು ನಡುವಿನ ರೈಲ್ವೆ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಸಹ ಪರೀಕ್ಷಿಸಿದರು. ಸುಮಾರು 14 ಕಿ.ಮೀ ರೈಲು ಸಂಚಾರ ನಡೆಸುವ ಮೂಲಕ ಸಣ್ಣಪುಟ್ಟ ಲೋಪದೋಷಗಳನ್ನು ತಿಳಿದುಕೊಂಡರು. ಇದಲ್ಲದೆ ಸೇತುವೆ ಮೇಲೆ ಸಂಚಾರ ಮತ್ತಿತರ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿ ಮಾಹಿತಿ ಪಡೆದರು.
ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜನಿಯರ್‌ಗಳಾದ ಉಮಾಮಹೇಶ್ವರ, ರಾಮಾಶ್ರಮಜಾ ಹಾಗೂ ಸಿಬ್ಬಂದಿ, ಕಾರ್ಮಿಕರು ಇದ್ದರು.