ರಾಯಚೂರು. ಇನ್ನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಕಸ್ಬೆಕ್ಯಾಂಪ್ ನಡೆದಿದೆ.
ಮೃತರು ಮಾರಿಯಾ ಗೀತಾ (38) ಅಮಲ್ ಪಾಲ್ (64) ವರ್ಷ ವೆಂದು ತಿಳಿದು ಬಂದಿದೆ.
ಹೈದ್ರಾಬಾದ್ ನಿಂದ ಸಿಂಧನೂರು ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್ ಹಾಗೂ ಗದಗನಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದ ಇನ್ನೋವಾ ಕಾರ್ ನಿನ್ನೆ ತಡ ರಾತ್ರಿ ಕಸಬೆ ಕ್ಯಾಂಪ್ ಬಳಿ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು ಏಳು ಜನರ ಪೈಕಿ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದರೆ,
ಉಳಿದ ಐದು ಜನರಿಗೆ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಕುರಿತು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.