ರಾಯಚೂರು ;- ನಗರದ ನೀಲಕಂಠೇಶ್ವರ ಬಡಾವಣೆಯ ಆರಾಧ್ಯ ದೈವ, ಶ್ರೀ ನೀಲಕಂಠೇಶ್ವರ ದೇವರ ಉಚ್ಚಾಯ ಮಹೋತ್ಸವ ಸಕಲ ಮಂಗಳವಾದ್ಯಗಳೊಂದಿಗೆ ಸಂಭ್ರಮಗಳಿಂದ ಆಚರಿಸಲಾಯಿತು. ಬೆಳಗ್ಗೆ ನೀಲಕಂಠೇಶ್ವರ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ಮಾಡಲಾಯಿತ್ತು. ಮಂಗಳವಾದ್ಯಗಳೊಂದಿಗೆ ಬಡಾವಣೆಯ ಮಹಿಳೆಯರ ಕಳಸಗಳೊಂದಿಗೆ, ಪಲ್ಲಕ್ಕಿ ತೆಗೆದುಕೊಂಡು ರಾಜ ಬೀದಿಗಳಲ್ಲಿ ಸಂಚರಿಸಿ, ಉತ್ಸವಮೂರ್ತಿ ಮತ್ತು ಗೋಪುರದ ಕಳಸ ಗಳನ್ನು ದೇವಸ್ಥಾನಕ್ಕೆ ಕರೆತಂದು ಧ್ವಜಾರೋಹಣ ಮತ್ತು ಕಳಸಾಹರೋಹಣ ನೆರವೇರಿಸಲಾಯಿತು. ನಂತರ ದೇವರಿಗೆ ಮಹಾರುದ್ರಭಿಷೇಕ, ಪೂಜೆ ಕಾಯಂ ಕಾರ್ಯಗಳು ನಡೆದವು. ಮಧ್ಯಾಹ್ನದ ಪ್ರಸಾದ್ ಸೇವೆ ನಿರ್ವಹಿಸಲಾಯಿತು. ಸಂಜೆ ಉಚ್ಚಾಯಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿ, ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ನಂದಿಕೋಲು ಸೇವೆಯೊಂದಿಗೆ ಸಾಂಗೋಪವಾಗಿ ಸಾಗಿತ್ತು, ಇದನ್ನು ನೂರಾರು ಭಕ್ತರು ಕಣ್ತುಂಬಿಕೊಂಡು ಶ್ರೀ ನೀಲಕಂಠೇಶ್ವರ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ, ನಗರಸಭೆ ಸದಸ್ಯ ಎನ್.ಕೆ. ನಾಗರಾಜ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಸೂಗುರೇಶ ಸಾಲಿಮಠ, ಗೌರವಾಧ್ಯಕ್ಷ ಅಮರೇಗೌಡ ಹಂಚಿನಾಳ, ಪದಾಧಿಕಾರಿಗಳಾದ ಹಾಗೂ ಬಡಾವಣೆಯ ಮುಖಂಡರಾದ, ಮಲ್ಲಿಕಾರ್ಜುನ್ ನಾಡಗೌಡ, ಸಿದ್ರಾಮರೆಡ್ಡಿ, ಬಿ.ಎಸ್ ಸುರಗಿಮಠ, ಅಂಭಪತಿ ಪಾಟೀಲ್, ಪ್ರಭನಗೌಡ, ಆಶೋಕಪ್ಪ ಮಿರ್ಜಾಪುರ್, ಶಂಕರಗೌಡ, ವೀರರೆಡ್ಡಿ, ರವೀಂದ್ರ ರೆಡ್ಡಿ, ಪಿ. ಮಹಾಂತೇಶ, ರವಿಪಾಟೀಲ್, ಸಂಗಯ್ಯ ಸೊಪ್ಪಿಮಠ, ಮಂಜುನಾಥ ಪುಂಡಿ, ಹಾಗೂ ಸಕಲ ಬಡಾವಣೆಯ ಭಕ್ತರು ಹಾಜರಿದ್ದರು.
Megha News > Local News > ಸಂಭ್ರಮದಿಂದ ಜರುಗಿದ ಶ್ರೀ ನೀಲಕಂಠೇಶ್ವರನ ಉಚ್ಚಾಯ ಮಹೋತ್ಸವ