ರಾಯಚೂರು. 3 ಎಕರೆಗಿಂತ ಕಡಿಮೆ ಇರುವ ಅರಣ್ಯ ಭೂಮಿ ಒತ್ತುವರಿದಾರರನ್ನು ಒಕ್ಕಲೆಬ್ಬಿ ಸಬಾರದು ಎಂದು ಸರ್ಕಾರದ ಆದೇಶವಿದ್ದರೂ ತಾಲೂಕಿನ ಬಾಪೂರ ಗ್ರಾಮದ ಸಣ್ಣ ನರಸಪ್ಪ ತಂದೆ ಬಂಗಾರಪ್ಪ ಎನ್ನುವವರ ಭೂಮಿಯಲ್ಲಿ ಹತ್ತಿ ಬಿತ್ತನೆ ಮಾಡಿದ್ದನ್ನು ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ರೈತನ ಮೇಲೆ ದೌರ್ಜನ್ಯ ಎಸಗಿ ಹತ್ತಿ ಬೆಳೆ ನಾಶ ಮಾಡಿ ಗಿಡ ಬೆಳೆಸಲು ಕುಣಿ ಅಗೆಸಿದ್ದಾರೆ.
ಬಾಪೂರ ಗ್ರಾಮದ ಸಣ್ಣ ನರಸಪ್ಪ ತಂದೆ ಬಂಗಾರಪ್ಪ ಅವರ ಸರ್ವೆ ನಂ 18ರ 3 ಎಕರೆ ಆರಣ್ಯ ಸಾಗುವಳಿ ಭೂಮಿಯಲ್ಲಿ ಹತ್ತಿ ಬೆಳೆ ಯನ್ನು ರಾಯಚೂರು ವಲಯ ಅರಣ್ಯ ಅಧಿಕಾರಿಗಳು ನಾಶಪಡಿಸಿದ್ದಾರೆ.ಜಮೀನುನಲ್ಲಿ ಜೆಸಿಬಿ ಮೂಲಕ ತಗ್ಗು ಅಗೆದು ಗಿಡಗಳನ್ನು ನಡೆಸುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ನಡೆಯನ್ನು ಗ್ರಾಮಸ್ಥರು ಖಂಡಿಸಿದ್ದಾರೆ. ಬಿತ್ತನೆ ಮಾಡಿದ ಬೆಳೆ ನಾಶ ಮಾಡಿದ್ದು ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.