ರಾಯಚೂರು. ತುಂಗಭದ್ರಾ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದ ನೀರು ಹರಿಸಿರುವು ದರಿಂದ ನದಿ ತೀರದ ಎಲೆ ಬಿಚ್ಚಾಲಿ ಗ್ರಾಮದ ಲ್ಲಿನ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಏಕಶಿಲಾ ಬೃಂದಾವನವು ಜಲಾವೃತವಾಗಿದೆ.
ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮವು ತುಂಗಭದ್ರಾ ನದಿ ತೀರದಲ್ಲಿದ್ದು, ಗುರು ರಾಘವೇಂದ್ರ ಸ್ವಾಮಿಗಳ ಏಕಶಿಲಾ ಬೃಂದಾವನ ಮತ್ತು ರಾಯರ ಜಪದಕಟ್ಟೆ ಮುಳುಗಡೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದು,
ರಾಯರ ಏಕಶಿಲಾ ಬೃಂದಾವನವು ಸಂಪೂರ್ಣ ಮುಳುಗಡೆಯಾಗಿದೆ.
ಏಕಶಿಲಾ ಬೃಂದಾವನ ದರ್ಶನ ಭಕ್ತರಗೆ ನಿರ್ಬಂಧಿಸಲಾಗಿದೆ. ಅರ್ಚಕರು ರಾಯರ ಬೃಂದಾವನಕ್ಕೆ ನೀರಿನಲ್ಲೇ ಪೂಜೆ, ಅಭಿಷೇಕ ಮಾಡಿದ್ದಾರೆ.
ಎಲೆಬಿಚ್ಚಾಲಿಯ ಬಿಚ್ಚಾಲಮ್ಮ ದೇವಾಲಯ ಸುತ್ತಲೂ ನೀರು ಆವರಿಸಿದೆ. ಇಲ್ಲಿನ ಉಗ್ರ ನರಸಿಂಹ ದೇವಾಲಯ, ನಾಗದೇವತೆ ಕಟ್ಟೆ, ಶಿವಲಿಂಗ ಜಲಾವೃತವಾಗಿದ್ದು ಮುಳುಗಡೆ ಹಂತದಲ್ಲಿವೆ.