Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ನಾವೆಲ್ಲರೂ ಭೋಗಿಯಿಂದ ಯೋಗಿಯಾಗಿ ಸಮಾಜದ ಆಸ್ತಿಯಾಗಬೇಕು

ನಾವೆಲ್ಲರೂ ಭೋಗಿಯಿಂದ ಯೋಗಿಯಾಗಿ ಸಮಾಜದ ಆಸ್ತಿಯಾಗಬೇಕು

ರಾಯಚೂರು.ನಾವೆಲ್ಲರೂ ಭೋಗಿಯಿಂದ ಯೋಗಿಯಾ ಗಬೇಕು ಹಾಗೂ ಸಮಾಜದ ಆಸ್ತಿಯಾಗಬೇಕು ಜೊತೆಗೆ ಮನ ಪರಿವರ್ತನೆ ಆಗಬೇಕು. ಬೇಡುವ ಬದಲು ನೀಡುವಂತವರಾಗಬೇಕು ಎಂದು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಸ್ಮಿತಾ ಅಕ್ಕ ಹೇಳಿದರು.

ನಗರದ ಮಡಿವಾಳ ಮಾಚಿದೇವ ಸಮಾಜದ ಸಮುದಾಯ ಭವನದಲ್ಲಿ ಜಿಲ್ಲಾ ಮಡಿವಾಳ ಸಮಾಜ, ಹಾಗೂ ಜಿಲ್ಲಾ ಮಡಿವಾಳ ಮಾಚಿ ದೇವ ಸಮಾಜ ಮಹಿಳಾ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು, ಜೀವನ ಅಮೂಲ್ಯವಾದದು ಅದನ್ನು ಆಧ್ಯಾತ್ಮಿಕತೆ ಯಿಂದ ಜೋಡಿಸಿ ಎಂದು ತಿಳಿ ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ ವಕೀಲ ಮಾತನಾಡಿ, ಒಳ್ಳೆಯ ಯೋಚನೆ ಒಳ್ಳೆ ಯ ಕೆಲಸವನ್ನು ಮಾಡುತ್ತದೆ. ಹಾಗೂ ಶ್ರಾವಣ ಮಾಸದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ
ಜಿ.ಶಿವಮೂರ್ತಿ, ವೀರಭದ್ರಪ್ಪ ಹಿರೇದೊಡ್ಡಿ ಸೇರಿದಂತೆ ಅನೇಕರು ಇದ್ದರು.

Megha News