ರಾಯಚೂರು. ಗಾಳಿ ಸಹಿತ ಮಳೆಗೆ ಮರಗಳು ಧರೆಗುಳಿದಿದ್ದು, ಸಿಡಿಲಿಗೆ ತೆಂಗಿನ ಮರ ಒತ್ತಿ ಹುರಿದಿದೆ ಮತ್ತೊಂದೆಡೆ ವೃತ್ತದಲ್ಲಿ ಅಳವಡಿಸಿದ್ದ ಮೇಲ್ಚಾವಣಿ ಕಿತ್ತುಹೋಗಿರುವ ಘಟನೆ ನಡೆದಿದೆ.
ಕಳೆದ ರಾತ್ರಿ ಗಾಳಿ ಸಹಿತ ಮಳೆಯಾದ ಕಾರಣ ನಗರದಲ್ಲಿ ಬಹುತೇಕ ಕಡೆ ಮರಗಳು ಉರುಳಿ ಬಿದ್ದಿವೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ, ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ನೀರನ್ನು ಹೊರ ಹಾಕಲು ತೊಂದರೆ ಅನುಭವಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಹಾಕಿದ್ದ ನೆರಳು ಪರದೆಯೊಂದು ಮುರಿದು ಬಿದ್ದಿಗೆ ತಾಲೂಕಿನ ವೆಂಕಟಾಪೂರದಲ್ಲಿ ಬೃಹತ್ತಾದ ಮರವೊಂದು ಟ್ರಾಕ್ಟರ್ ಮೇಲೆ ಬಿದ್ದಿಗೆ ಇದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ, ದೇವಸೂಗುರು ಗ್ರಾಮದಲ್ಲಿ ಸಿಡಿಲಿಗೆ ತೆಂಗಿನ ಮರಕ್ಕೆ ಬೆಂಕಿ ತಗುಲಿ ಹಾನಿಯಾಗಿದೆ. ನಿನ್ನೆ ಸುರಿದ ಗಾಳಿ ಸಹಿತ ಮಳೆಗೆ ಸಾಕಷ್ಟು ಅವಾಂತರ ನಡೆದಿವೆ.