ರಾಯಚೂರು : ಆರೋಗ್ಯವಂತ ಸಮಾಜಕ್ಕೆ ತಾಯಿ-ಮಗುವಿನ ಆರೈಕೆ ಎಷ್ಟು ಅವಶ್ಯವೋ, ಅದೇ ರೀತಿ ಮಗುವಿಗೆ ಸ್ತನ್ಯ ಪಾನವೇ ಅತ್ಯುತ್ತಮ ಆರೋಗ್ಯ ಎಂಬ ಅರಿವು ಗ್ರಾಮೀಣ ಭಾಗದಲ್ಲಿ ತಿಳಿಸಲಾಗಿದೆ . ಮಗುವಿಗೆ ರೋಗ ನಿರೋಧಕ ಶಕ್ತಿ ಹಾಗೂ ಪೌಷ್ಟಿಕಾಂಶ ಯತೇಚ್ಛವಾಗಿ ತಾಯಿ ಹಾಲು ನೀಡುವ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ನಡಲಾಗುತ್ತಿದೆ ಎಂದು ಡಾ.ಮಲ್ಲೇಶಪ್ಪರವರು ತಿಳಿಸಿದರು.
ಅವರಿಂದು ನಗರದ ನವೋದಯ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ , ನಗರ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಜನತಾ ಕಾಲೋನಿಯಲ್ಲಿ ವಿಶ್ವಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದವರು ಆರೋಗ್ಯ ದೃಷ್ಟಿಯಿಂದ ಬಾಣಂತಿ ಮಗುವಿಗೆ ಸೂಕ್ತ ಆಹಾರ ಕ್ರಮ ಅನುಸರಿಸಲಾಗುತ್ತದೆ. ಆದರೆ ಕೆಲವರು ಮೂಢನಂಬಿಕೆ ಮೌಢ್ಯದಂತಹ ಅಂಶ ಬಳಸುವ ಪದ್ಧತಿ ಬಗ್ಗೆ ಎಚ್ಚರಿಕೆ ನೀಡುವ ಕೆಲಸ ಸ್ಥಳೀಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಿಳಿ ಹೇಳಬೇಕು” ಎಂದು ಸಲಹೆ ನೀಡಿದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ಬೋರಮ್ಮ ಜಿಯವರು ಮಾತನಾಡಿ ತಾಯಿ ಹಾಲು ಅಮೃತಕ್ಕೆ ಸಮಾನ. ಮಗು ಜನಿಸಿದ ತಕ್ಷಣ ತಾಯಿಯ ಹಾಲನ್ನು ನೀಡಬೇಕು, ಹೊರಗಿನ ಹಾಲನ್ನು *ಹಾಕದೆ* ತಾಯಿ ಹಾಲನ್ನೇ ಅತಿ ಹೆಚ್ಚು *ಹಾಕಬೇಕು* . ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ವಿಶ್ವ ಸ್ತನ್ಯಪಾನ ಸಪ್ತಾಹ 2024ರ ಘೋಷ ವಾಕ್ಯ ‘ಕೊರತೆಗಳನ್ನು ಕೊನೆಗೊಳಿಸಿ ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ’ ಎನ್ನುವ ಘೋಷವಾಕ್ಯದಂತೆ ಗರ್ಭಿಣಿ ಮತ್ತು ಬಾಣಂತಿಯರು ಹಾಗೂ ಮಕ್ಕಳ ತಾಯಂದಿರಿಗೆ ಎದೆಯ ಹಾಲಿನ ಮಹತ್ವದ ಅರಿವು ಮೂಡಿಸಬೇಕಿದೆ. ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರದಲ್ಲಿ ಸಪ್ತಾಹ ಕಾರ್ಯಕ್ರಮ ನಡೆಸಿ ತಾಯಿ ಹಾಲಿನ ಮಹತ್ವ ತಿಳಿಸಲಾಗುತ್ತಿದೆ” ಎಂದರು.
ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ , ಬಾಣಂತಿಯರಿಗೆ ಹಾಗು ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಪ್ರಜ್ವಲ , ಡಾ.ಅರುಣಾ , ಸಮುದಾಯ ವೈದ್ಯಕೀಯ ವಿಭಾಗದ ಡಾ.ಆರ್ಶಿಯಾ , ಡಾ.ಸುಜಾತಾ , ಡಾ.ಲಕ್ಷ್ಮೀ , ಡಾ.ರೂಪಕಲಾ , ಡಾ.ರಾಧಾ , ಡಾ.ಪ್ರತಿಭಾ , ವೈದ್ಯಾಧಿಕಾರಿಗಳಾದ ಡಾ.ಮಾ.ಬಿ ಪಾಟೀಲ್ , ಕಿರಿಯ ವೈದ್ಯರು ಸಾಮಾಜಿಕ ಕಾರ್ಯಕರ್ತರಾದ ಓಂಕಾರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.