Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಅಕ್ರಮ ಮದ್ಯ ಮಾರಾಟ ಮೇಲೆ ದಾಳಿ, ಅಚ್ಚರಿಯಾಗಿ 500 ಮುಖ ಬೆಲೆಯ 62 ಝರಾಕ್ಸ್ ಬಂಡಲ್ ಪತ್ತೆ

ಅಕ್ರಮ ಮದ್ಯ ಮಾರಾಟ ಮೇಲೆ ದಾಳಿ, ಅಚ್ಚರಿಯಾಗಿ 500 ಮುಖ ಬೆಲೆಯ 62 ಝರಾಕ್ಸ್ ಬಂಡಲ್ ಪತ್ತೆ

ಲಿಂಗಸುಗೂರು.ಅಕ್ರಮ ಮದ್ಯ ಮಾರಾಟದ ಮೇಲೆ ಎಸ್‌ಎಫ್‌ಟಿ ತಂಡ ದಾಳಿ ನಡೆಸಿದ ವೇಳೆ ಮನೆಯಲ್ಲಿ 500 ಮುಖ ಬೆಲೆಯ ಝರಾಕ್ಸ್ ನೋಟುಗಳು ಪತ್ತೆಯಾಗಿರುವ ಘಟನೆ ನಡೆದಿದೆ.

ಅಕ್ರಮ ಮದ್ಯ ಮಾರಾಟದ ಕುರಿತು ದೂರು ಹಿನ್ನೆಲೆಯಲ್ಲಿ ಅಬಕಾರಿ ಪೋಲಿಸರು ಪಟ್ಟಣದ
ನಿವಾಸಿ ಗೌಳಿಪುರದ ಚೋಟುಸಾಬ (ಉರ್ಫ್ ಚಟ್ಯಾ) ಮನೆ ಮೇಲೆ ದಾಳಿ ನಡೆಸಿದರು, ದಾಳಿ ವೇಳೆ 500 ಮುಖ ಬೆಲೆಯ ಝರಾಕ್ಸ್‌ನ 62 ಬಂಡಲ್‌ಗಳು ಪತ್ತೆಯಾಗಿದ್ದು ಜಪ್ತಿ ಮಾಡ ಲಾಗಿದೆ.
ಎಸ್‌ಟಿಎಫ್‌ ತಂಡದ ಮುಖ್ಯಸ್ಥ ವಿಜಯ ಕುಮಾರ, ಅಬಕಾರಿ ಇನ್‌ಸ್ಪೆಕ್ಟರ್ ಪಾಂಡುರಂಗ ನೇತೃತ್ವದಲ್ಲಿ ದಾಳಿ ನಡೆಸಿ 500 ಮುಖ ಬೆಲೆಯ 62 ಬಂಡಲ್‌ಗಳು ವಶಕ್ಕೆ ಪಡೆದುಕೊಂಡು
ದೂರು ದಾಖಲಿಸಲಾಗಿದೆ. ಈ ಕುರಿತು ದೂರು ದಾಖಲಿಸಿದ್ದು ತನಿಖೆ ನಡೆಸಿ ಕ್ರಮ ಕೈಗೊ ಳ್ಳುವಂತೆ ಅಬಕಾರಿ ಪೋಲಿಸರು ತಿಳಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು 500 ಮುಖ ಬೆಲೆಯ ಝರಾಕ್ಸ್‌ನ ಮಾಡಲಾಗಿತ್ತು, ಇದರಲ್ಲಿ 62 ಬಂಡಲ್ ದೊರೆತಿದ್ದು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಇನ್‌ಸ್ಪೆಕ್ಟರ್ ಪುಂಡಲಿಕ ಪಟತರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Megha News