ಸಿಂಧನೂರು.ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 172 ಲೀಟರ್ ಮದ್ಯ ಹಾಗೂ ವಾಹನ ವಶಪಡಿಸಿ ಕೊಂಡ ಘಟನೆ ನಡೆದಿದೆ.
ತಾಲೂಕಿನ ಆಯನೂರು ಚಿಂತಮಾನದೊಡ್ಡಿ ಕಾಲುವೆ ರಸ್ತೆಯಲ್ಲಿ ದ್ಯಾವನಗೌಡ ಮತ್ತು ಶರಣಬಸವ ಎನ್ನುವವರು ಆಟೋದಲ್ಲಿ
ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮದ್ಯ, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಂಧನೂರು ವಲಯದ ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ವಾಹನದ ಮಾಲೀಕನ ವಿರುದ್ಧ ಪ್ರಕರಣ ದಾಖ ಲಿಸಲಾಗಿದೆಂದು ಅಬಕಾರಿ ಸಿಪಿಐ ಸಿದ್ದರೂಡ ಲಕ್ಕಶೆಟ್ಟಿ ಅವರು ತಿಳಿಸಿದ್ದಾರೆ.