ರಾಯಚೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿರುವ ರಾಜ್ಯ ಸರ್ಕಾರ ಅತಿಹೆಚ್ಚು ಬಂಡವಾಳ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ. ಈಮಧ್ಯೆ ಕಲ್ಯಾಣ ಕರ್ನಾಟಕ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶವೆಂದು ಘೋಷಿಸಿ ಅಧಿಸೂಚನೆ ಪ್ರಕಟಿಸಿದೆ.
ಕೈಗಾರಿಕಾ ಕೇಂದ್ರದಲ್ಲಿ ಲಭ್ಯವಿರುವ ಜಮೀನನೊಂದಿಗೆ 1744.75 ಎಕರೆ ವಿಸ್ತರಿಸಲು ನಿರ್ಧರಿಸಿದೆ.ಚಿಕ್ಕಸೂಗೂರು,ವಡ್ಲೂರು, ಏಗನೂರು ಮತ್ತು ಕುಕುನೂರು ಗ್ರಾಮಗಳ ಆಯ್ದೆ ಜಮೀನು ಕೈಗಾರಿಕಾ ಪ್ರದೇಶದಡಿ ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿದೆ.
ಅದೇ ರೀತಿ ಯಾದಗಿರಿ ಜಿಲ್ಲೆಯ 3284.27 ಎಕರೆ ಪ್ರದೇಶವರೆಗೆ ವಿಸ್ತರಿಸಿ ಕಡೆಚೂರು ವಿಶೇಷ ಹೂಡಿಕೆ ಪ್ರದೇಶವೆಂದು ಘೋಷಿಸಲಾಗಿದೆ. ಕಡೆಚೂರು ಮತ್ತು ಬಡಿಯಾಳ ಗ್ರಾಮದ ಭೂಮಿಯನ್ನು ಕೈಗಾರಿಕೆ ಬಳಸಲು ಉದ್ದೇಶಿಸಿಲಾಗಿದೆ.
ವಿಶೇಷ ಹೂಡಿಕೆ ಪ್ರದೇಶವೆಂದು ಸರ್ಕಾರ ಘೋಷಣೆಯಾಗಿದ್ದರಿಂದ ಕರ್ನಾಟಕ ವಿಶೇಷ ಹೂಡಿಕೆ ಕಾಯ್ದೆ 2022 ರಂತೆ ಕೈಗಾರಿಕೆಗಳ ಅಭಿವೃದ್ದಿಗೆ ಕೆಐಡಿಬಿಯೊಂದಿಗೆ ಕಾರ್ಯನಿರ್ವಹಿಸಲು ಪ್ರತ್ಯೇಕ ಪ್ರಾಧಿಕಾರ ಅಸ್ತಿತಕ್ಕೆ ಬರಲಿದೆ.ವಿಶೇಷಹೂಡಿಕೆ ಘೋಷಣೆಯಿಂದಾಗಿ ದೊಡ್ಡ, ಅತಿದೊಡ್ಡ ಹಾಗೂ ಮೇಘಾ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡುವದು ಹಾಗೂ ವಿಶ್ವ ಗುಣಮಟ್ಟದ ಸೌಲಭ್ಯ ಒದಗಿಸುವದು ಆಧ್ಯತೆಯಾಗಲಿದೆ.
ರಸ್ತೆ,ಚರಂಡಿ,ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ ವ್ಯವಸ್ಥೆಗೆ ಹೊಸದಾಗಿ ಅಸ್ತಿತ್ವಕ್ಕೆ ಬರುವ ಪ್ರಾಧಿಕಾರ ವ್ಯವಸ್ಥೆ ಕಲ್ಪಿಸಬೇಕಿದೆ.ಈಗಾಗಳೇ ಕೈಗಾರಿಕೆ ಔದ್ಯೋಗಿಕ ಕೇಂದ್ರದಲ್ಲಿ 1750 ಎಕರೆ ಪ್ರದೇಶದಲ್ಲಿದ್ದು ಅನೇಕ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಸ್ಥಗಿತಗೊಂಡಿರುವ ಕೈಗಾರಿಕೆಗಳು ಸೇರಿದಂತೆ ಲಭ್ಯವಿರುವ ನಿವೇಶನ ಪಡೆಯಲು ಅನೇಕ ಉದ್ಯಮಿಗಳು ಅರ್ಜಿ ಹಾಕಿ ಕುಳಿತಿದ್ದಾರೆ. ಆದರೆದ ಬೃಹತ್ ಉದ್ಯಮಗಳು ಭಾರದೇ ಇರುವದರಿಂದ ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಾಗಿಲ್ಲ. ಆರ್‌ಟಿಪಿಎಸ್, ವೈಟಿಪಿಎಸ್ ಮತ್ತು ಹಟ್ಟಿಚಿನ್ನದ ಗಣಿ ಹೊರತುಪಡಿಸಿದರೆ ದೊಡ್ಡ ಕೈಗಾರಿಕೆಗಳು ಈ ಭಾಗದಲ್ಲಿ ಪ್ರಾರಂಭಿಸಲು ಮುಂದೆ ಬಂದಿಲ್ಲ. ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿಯೂ ಕೈಗಾರಿಕೆ ಭೂಮಿ ಲಭ್ಯವಿದ್ದು ಕೈಗಾರಿಕೆ ಪ್ರಾರಂಭಗೊಳ್ಳುತ್ತಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರ ವಿಶೇಷ ಹೂಡಕೆ ಪ್ರದೇಶವೆಂದು ಘೋಷಿಸಿ ಅಗತ್ಯ ಸೌಕರ್ಯ ಒದಗಿಸಲು ಮುಂದಾಗಿದೆ.
ವಿಶೇಷ ಹೂಡಿಕೆ ಪ್ರದೇಶದ ಕಾಯ್ದೆಯಡಿ ರಾಜ್ಯ ಸರ್ಕಾರ ಅನೇಕ ಸೌಕರ್ಯ ಒದಗಿಸುವ ಜೊತೆಗೆ ಹೂಡಿಕೆ ಮೇಲುಸ್ತುವಾರಿಯನ್ನು ನಿರ್ವಹಿಸಬೇಕಿದೆ. ಹೂಡಿಕೆದಾರರ ಆಸಕ್ತಿಗೆ ಸ್ಪಂದಿಸಿ ಸೌಲಭ್ಯಗಳನ್ನು ಒದಗಿರುವ ಬದ್ದತೆ ನೀಡಬೇಕಿದೆ.
ಕೈಗಾರಿಕೆಗಳ ಹೆಸರಿನಲ್ಲಿ ರೈತರ ಪಡೆಯುವ ಭೂಮಿಯನ್ನು ಸಕಾಲದಲ್ಲಿ ಬಳಸುವ ಬದ್ದತೆಯೂ ಪ್ರದರ್ಶಿಸಬೇಕಿದೆ. ಕಡಿಮೆ ದರದಲ್ಲಿ ಭೂಮಿಯನ್ನು ಖರೀದಿಸಿ ನಂತರ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವ ಆರೋಪಗಳು ಬಾರದಂತೆ ಎಚ್ಚರವಹಿಸಬೇಕಿದೆ. ಲೀಸ್ ಕಂ ಸೇಲ್ ಆಧಾರದ ಮೇಲೆ ನಿವೇಶನ ಪಡೆಯುವ ಕೈಗಾರಿಕೆಗಳು ಕಾಲಾನಂತರದಲ್ಲಿ ನಿವೇಶನ ಅಡವಿಟ್ಟು, ಇಲ್ಲ ಮಾರಾಟ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದ್ದು ಕೆಐಡಿಬಿ ಮತ್ತು ಕೈಗಾರಿಕೆ ಇಲಾಖೆ ಗಮನ ನೀಡುವದು ಅವಶ್ಯಕತೆಯಿದೆ.