ರಾಯಚೂರು,ಏ.೧೮- ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಕ್ರಾಸ್ ಬಳೊ ಬೊಲೊರೊ ವಾಹನ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ಜನ ಸ್ಥಳದಲ್ಲಿಯೇ ಮೃತ ಪಟ್ಡ ಘಟನೆ ಬೆಳಗಿನ ಜಾವ ನಡೆದಿದೆ.
ಮೃತಪಟ್ಟವರನ್ನು ತೆಲಂಗಾಣ ಹಿಂದುಪುರ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ. ಕುರಿಗಳನ್ನು ಖರೀದಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಮೃತರನ್ಬು ಮರಳಿ(೨೪), ನಾಗಭೂಷಣ(೨೮) ಸೋಮನಾಥ(೨೯) ನಾಗರಾಜ( ೩೦) ಎಂದು ಗುರುತಿಸಲಾಗಿದೆ. ಜಾಲಹಳ್ಳಿ ಪೊಲೀಸರು ಸ್ಥಳಕ್ಮೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಗಾಯಳುಗಳನ್ನು ರಿಮ್ಸ್ ಅಸ್ಪತ್ರೆಗೆ ದಾಖಲಿಸಲಾಗಿದೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.