ರಾಯಚೂರು: ಹೋರಾಟಗಾರ ಚಂದ್ರಶೇಖರ ಬಾಳೆಯವರ 72 ನೇ ವರ್ಷ ಹುಟ್ಟಹಬ್ಬದಂಗವಾಗಿ ಡಿ.2 ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಚಂದ್ರಶೇಖರಬಾಳೆಯವರ ಅಭಿನಂದನಾ ಗ್ರಂಥ ಅರುಣೋದಯ ಬಿಡುಗಡೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಬೆಳಿಗ್ಗೆ 10.30 ಆಯೋಜಿಸಲಾಗಿದೆ ಎಂದು ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮವನ್ನು ಸಿಪಿಐ(ಎಂ) ಕಾರ್ಯದರ್ಶಿ ಕೆ.ಪ್ರಕಾಶ ಉದ್ಘಾಟಿಸಲಿದ್ದಾರೆ. ರಾಷ್ಟಿçÃಯ ನಾಟಕ ಶಾಲೆ ನಿರ್ದೇಶಕ ಸಿ.ಬಸವಲಿಂಗಯ್ಯ ಅರುಣೋದಯ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಗ್ರಂಥದ ಕುರಿತಂತೆ ಸಾಹಿತಿ ಪ್ರೋ.ಆರ್.ಕೆ.ಹುಡಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜನಶಕ್ತಿ ಪತ್ರಿಕೆ ಸಂಪಾದಕ ಎಸ್.ವೈ.ಗುರುಶಾಂತ, ಶ್ಯಾಮಲಾಪುರುಷೋತ್ತಮ ಕಲಾಲಬಂಡಿ, ರಾಮನಗೌಡ ಜಾಲಿಬೆಂಚಿ ಭಾಗಿಯಾಗಲಿದ್ದಾರೆ. ಅಭಿನಂದನಾ ಗ್ರಂಥ ಸಂಪಾದಕ ನಿರಂಜನ ಪರಂಜಪೆ ಮಾತನಾಡಲಿದ್ದಾರೆ ಎಂದರು.
ಹೈದ್ರಾಬಾದ ನಿಜಾಮ ಆಡಳಿತದ ನಂತರ ರಾಜ್ಯ ಒಕ್ಕೂಟ ವ್ಯವಸ್ಥೆಗೆ ಸೇರಿದಾಗಿನಿಂದ ಬಲಿಷ್ಟ ಚಳುವಳಿಗಳು ಮಂಕಾಗಿರುವಾಗ ಚಂದ್ರಶೇಖರ ಬಾಳೆಯವರು ನಾರಾಯಣಪುರುಬಲದಂಡೆ ಕಾಲುವೆ ಹಾಗೂ ತುಂಗಭದ್ರ ಎಡದಂಡೆ ಕಾಲುವೆ ಕೊನೆಭಾಗದ ಹೋರಾಟದಲ್ಲಿ ತೊಡಗಿಸಿಕೊಂಡು ಬಲಿಷ್ಠ ಹೋರಾಟ ರೂಪಿಸಲು ಕಾರಣರಾದರು. ಪುರುಷೋತ್ತಮ ಕಲಾಲಬಂಡಿ ಜೊತೆಗೆ ಚಂದ್ರಶೇಖರ ಬಾಳೆಯವರು ನಡೆಸಿದ ಹೋರಾಟದ ಫಲವಾಗಿ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಜಾರಿಗೆ ಕಾರಣರಾದರು.
ಎರಡನೇ ಹಂತದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದ್ದ ನಾರಾಯಣಪುರು ಬಲದಂಡೆ ಕಾಲುವೆ ಜಾರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಮೂಲಕ ದೇವದುರ್ಗ, ಲಿಂಗಸೂಗೂರು ಮತ್ತು ರಾಯಚೂರು ತಾಲೂಕಗಳಲ್ಲಿ ಸಂಚರಿಸಿ ಹೋರಾಟ ಕಟ್ಟಿದರು. ನಂತರ ಪಕ್ಷಾತೀತವಾಗಿ ನಾರಾಯಣ ಪುರ ಬಲದಂಡೆ ಕಾಲುವೆ ಹೋರಾಟದ ಮೂಲಕ ಸುಧೀರ್ಘ ಹೋರಾಟಕ್ಕೆ ಕಾರಣರಾದರು. ಎಂ.ಎಸ್.ಪಾಟೀಲ್ ಸಭಾಪತಿಗಳಾಗಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ಎಚ್.ಡಿ.ದೇವೆಗೌಡರನ್ನು ದೇವದುರ್ಗಕ್ಕೆ ಕರೆಯಿಸಿ ಸ್ವಾಭಿಮಾನಿ ರೈತ ಸಮಾವೇಶ ನಡೆಸಿದರು. ಸಮಾವೇಶದಲ್ಲಿ ಎಚ್.ಡಿ.ದೇವೆಗೌಡರು ನೀಡಿದ ಭರವಸೆಯಂತೆ ಮುಂದೆ ಜನತಾಪಕ್ಷ ಅಧಿಕಾರಕ್ಕೆ ಬಂದಾಗ ನಾರಾಯಣಪುರು ಬಲದಂಡೆ ಕಾಲುವೆ ಜಾರಿಗೆ ಘೋಷಣೆ ಮಾಡಲಾಯಿತು. ಆ ಕಾರಣದಿಂದ ದೇವದುರ್ಗ 200 ಹೆಚ್ಚು ಗ್ರಾಮಗಳಿಗೆ ನೀರು ಬರಲು ಕಾರಣವಾಯಿತು. 0 ಕಿಮಿದಿಂದ 95 ಕಿಮೀ ವರಗೆ ಮುಖ್ಯಕಾಲುವೆ, ಉಪಕಾಲುವೆಗೆಗಳು ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುವುದರ ಹಿಂದೆ ಚಂದ್ರಶೇಖರ ಬಾಳೆಯವರ ಶ್ರಮವಿದೆ. ಅವರ ಹೋರಾಟವನ್ನು ಸ್ಮರಿಸುವ ಜೊತೆಗೆ ಹೋರಾಟದ ನೆನಪಿಗಾಗಿ ಅರುಣೋಧಯ ಅಭಿನಂದನಾ ಗ್ರಂಥ ಬಿಡುಗಡೆಗೊಳ್ಳಲಿದೆ. ಹೋರಾಟಗಾರರು, ಸಂಘಟನೆಗಳು,ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಬದಲ್ಲಿ ಬಿ.ಬಸವರಾಜ, ಈರಣ್ಣ ಶೆಟ್ಟಿ ಭಂಡಾರಿ, ಲಿಂಗಪ್ಪ ಪೂಜಾರಿ, ಆರ್.ಬಸವರಾಜ, ಪರಪ್ಪ ನಾಗೋಲಿ, ಶಿವಶಂಕರಬಳೆ ಉಪಸ್ಥಿತರಿದ್ದರು.