ರಾಯಚೂರು- ನಗರದ ಹಳೆ ಆಶ್ರಯ ಕಾಲೋನಿ ಬಳಿ ಜಂಬಲಮ್ಮ ಗುಡಿ ಬಳಿ ನೂರಾರು ಜನರು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳಲು ಮುಂದಾದ ಘಟನೆ ನಡೆದಿದೆ. ಮನೆಯಿಲ್ಲ ಕೂಲಿಕಾರ್ಮಿಕರಿಗೆ ಬಡಾವಣೆ ವಿವಿಧ ರಾಜಕೀಯ ಮುಖಂಡರುಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳುವಂತೆ ಹೇಳಿದ್ದರಿಂದ ಗುಂಪು ಗುಂಪಾಗಿ ತೆರಳಿ ಶೆಡ್‌ಗಳನ್ನು ಹಾಕಿಕೊಳ್ಳಲು ನೂಕು ನುಗ್ಗಲು ಎರ್ಪಟ್ಟಿದೆ.
ಕೆಲ ರಾಜಕೀಯ ಮುಖಂಡರುಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳಲು ಹಣವಸೂಲಿ ಮಾಡುತ್ತಿರುವದು ಅನೇಕ ದಿನಗಳಿಂದ ನಡೆಯುತ್ತಲೇ ಇದೆ. ಅನೇಕರು ಮನೆಗಳಿಗೆ ಅರ್ಜಿ ಹಾಕಿದ್ದರೂ ನಗರಸಭೆಯಿಂದ ಮನೆಗಳನ್ನು ನೀಡದೇ ಇರುವದರಿಂದ ಗುಡಿಸಲುಗಳನ್ನು ಸಹ ಬಾಡಿಗೆ ಪಡೆದು ವಾಸ ಮಾಡುತ್ತಿದ್ದಾರೆ. ಕೆಲವರು ಪ್ರಭಾವ ಬಳಸಿ ಸರ್ಕಾರಿ ಜಾಗದಲ್ಲಿ ಶೆಡ್‌ಗಳನ್ನು ಹಾಕಿ ಹಣವಸೂಲಿ ಮಾಡಿದರೂ ನಗರಸಭೆ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕೆಲ ಬಾರಿ ರಾಜಕೀಯದಿಂದ ನಿವಾಸಿಗಳನ್ನು ತೆರವುಗೊಳಿಸುವ ಪ್ರಯತ್ನ ನಡೆಯಿತಾದರೂ ನಿಂತು ಹೋಗಿತ್ತು. ಸಾವಿರಾರು ಜನರು ಮನೆಗಳಿಲ್ಲದೇ ಇರುವದರಿಂದ ಇಂದು ಏಕಾಎಕಿ ಗುಡಿಸಲು,ಶೆಡ್‌ಗಳನ್ನು ಹಾಕಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ನಗರಸಭೆ ಕುರಿತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸರಿ ಸುಮಾರು ಒಂದು ಕಿಮಿ ವರೆಗೆ ಸರ್ಕಾರಿ ಜಾಗದಲ್ಲಿ ಅಲ್ಲಲ್ಲಿ ತಾವೇ ಗುರುತು ಮಾಡಿಕೊಂಡು ತಾತ್ಕಾಲಿಕ ವಾಸ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬಹುತೇಕರು ವಸತಿ ಹೀನರಾಗಿದ್ದು, ಮುಖಂಡರುಗಳು ಹೇಳಿದ್ದರಿಂದ ಗುಡಿಸಲು ಹಾಕಿಕೊಂಡಿರುವದಾಗಿ ಹೇಳುತ್ತಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಅನೇಕರು ಸ್ಥಳಕ್ಕೆ ಧಾವಿಸಿದ್ದರಿಂದ ಸಿಕ್ಕುವರಿಗೆ ಸೀರುಂಡೆ ಎಂಬAತೆ ಮಹಿಳೆಯರು, ಜನರು ಸೇರಿಕೊಂಡಿದ್ದರು.