ರಾಯಚೂರು. ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದ್ದು, ಮುಂಜಾ ಗೃತೆಗಾಗಿ ಆರೋಗ್ಯ ಇಲಾಖೆಯಿಂದ ಟ್ಯಾಕ್ಸಿನ್ ಹಾಕಿಸುತ್ತಿದ್ದು ಸಾರ್ವಜನಿಕರು ತಪ್ಪದೇ ಹಾಕಿಸಿ ಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಮತ್ತು ತಾಲೂಕ ಆಸ್ಪತ್ರೆಗಳ ಐಸಿಯು ಘಟಕ ಗಳು ಉಪಕರಣ ಮತ್ತು ಆಕ್ಸಿಜನ್ ಸಿಲೆಂಡರ್ ಪಿಎಸ್ಎ ಆಕ್ಸಿಜನ್ ಪ್ಲಾಂಟ್ ಸುಸ್ಥಿತಿಯಲ್ಲಿ ಇಡಲಾಗಿರುತ್ತದೆ. ಹಾಗೂ ಜಿಲ್ಲೆಯಲ್ಲಿ ಜೆಎನ್ ವೈರಸ್ ತಡೆಗಟ್ಟುವ ನಿಟ್ಟಿ ನಲ್ಲಿ ಕೋವಿಡ್-19 ಮಾದರಿ ಸಂಗ್ರಹಣೆಯನ್ನು ಪ್ರತಿ ದಿನ ಜಿಲ್ಲೆಯ ಎಲ್ಲಾ ತಾಲೂಕ ಆಸ್ಪತ್ರೆ ಇನ್ನಿ ತರ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲು ಗುರಿ ನಿಗದಿ ಪಡಿಸಲಾಗಿದೆ.
ರಾಜ್ಯಾದಂತ ಒಟ್ಟು 30 ಸಾವಿರ ಡೋಸ್ ವ್ಯಾಕ್ಸಿನ್ ಇದ್ದು ನಮ್ಮ ರಾಯಚೂರು ಜಿಲ್ಲೆಯ ಒಟ್ಟು 820 ಡೋಸ್ ಕೋವಿಡ್ ಪ್ರಿಕಾಶ್‌ನರಿ ಡೋಸ್ ವ್ಯಾಕ್ಸಿನ ಬಂದಿರುತ್ತದೆ. ಅದನ್ನು ಕೋ ಮರ್‌ಬಿಟ್ ಇದ್ದವರಿಗೆ ಮೊದಲ ಆಧ್ಯತೆಯ ಮೇರೆಗೆ ವ್ಯಾಕ್ಸಿನ್ ಅನ್ನು ಹಾಕಲಾಗುತ್ತದೆ. ಎಲ್ಲಾ ತಾಲೂಕಗಳಲ್ಲಿ ವ್ಯಾಕಸಿನ್ ಲಭ್ಯವಿರುತ್ತದೆ ಸಾರ್ವಜನಿಕರು ಲಸಿಕೆಯನ್ನು ಪಡೆದುಕೊಳ್ಳಬೇ ಕೆಂದು ತಿಳಿಸಿದ್ದಾರೆ.