ರಾಯಚೂರು : ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರ ಸರ್ಕಾರ ಕಳೆದ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಶೋಷಿತರ, ಬಡವರ, ದೀನ ದಲಿತರ, ಹಿಂದುಳಿದವರ, ಯುವಕರ, ಮಹಿಳೆಯರ, ರೈತರ, , ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಇನ್ನೂ ಅನೇಕ ವಲಯಗಳ ಅಭ್ಯುದಯಕ್ಕಾಗಿ ಕಾರ್ಯರೂಪಕ್ಕೆ ತರುವ ಮೂಲಕ ವಿಶ್ವನಾಯಕ ಎಂಬ ಮಾನ್ಯತೆ ಪಡೆದಿದ್ದಾರೆ. ಅವರ ಕೈ ಬಲಪಡಿಸಲು ಮತ್ತೊಮ್ಮೆ ಆರ್ಶೀವದಿಸಬೇಕೆಂದು ರಾಜಾ ಅಮರೇಶ್ವರ ನಾಯಕ್ ಕೋರಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ರಾಯಚೂರು ನಗರದ ಬಿಜೆಪಿ – ಜೆಡಿಎಸ್ ಪಕ್ಷದ ಕಾರ್ಯಕರ್ಯರ ಸಮನ್ವಯ ಸಭೆಯಲ್ಲಿ ಮಾತನಾಡಿದವರು
ಕಳೆದ ಐದು ವರ್ಷದಲ್ಲಿ ನಾನು ಉಭಯ ಜಿಲ್ಲೆಯಗಳಲ್ಲಿ ಹಲವಾರು ಯೋಜನೆಗಳನ್ನು ತಂದಿರುವೆ ಭಾರತಮಾಲಾ ಯೋಜನೆಯಡಿ ಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತರುವ ಮೂಲಕ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿ ರುವೆ,ರಾಯಚೂರಿನಲ್ಲಿಯೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಛೇರಿಯನ್ನು ತಂದಿರುವೆ , ಜಲಧಾರೆ, ಜಲಜೀವನ್ ಮಿಷನ್ ಯೋಜನೆಗಳನ್ನು ರಾಯಚೂರಿನಲ್ಲಿ ಯಶಸ್ವಿಯಾಗಿ ಅನುಷ್ಠಾನ ಗೊಳಿಸುವ ಕೆಲಸ ಮಾಡಿರುವೆ, ಈ ಹಿಂದೆ ಇಲ್ಲಿ ಸಂಸದರಾದವರು ಯಾದಗಿರಿ ಜಿಲ್ಲೆಗೆ ಹೋಗಲ್ಲ ಎಂಬ ಅಭಿಪ್ರಾಯ ಇತ್ತು ಆದರೆ ನಾನು ಕಳೆದ ಐದು ವರ್ಷದಲ್ಲಿ ಆ ಜಿಲ್ಲೆಗೂ ಕೂಡ ಮೆಡಿಕಲ್ ಕಾಲೇಜು , ನೀರಾವರಿ ಸೇರಿದಂತೆ ಇನ್ನಿತರ ಯೋಜನೆಯನ್ನು ಪ್ರಧಾನಿಯನ್ನು ಕರೆಸಿ ಉದ್ಘಾಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಳಿದಿರುವ ದಿನಗಳಲ್ಲಿ ಕಾರ್ಯಕರ್ತರು ಯುದ್ದೋಪಾದಿಯಲ್ಲಿ ಕೆಲಸ ಮಾಡಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಗೆ ಮತ್ತೊಮ್ಮೆ ಆರ್ಶೀವದಿಸುವ ಮೂಲಕ ಹೆಚ್ಚಿನ ಅಂತರದಿಂದ ಗೆಲ್ಲಿಸುವ ಮೂಲಕ ಮೋದಿಜಿಯವರಿಗೆ ಬಲ ತುಂಬಬೇಕಾಗಿದೆ ಎಂದರು.
ಜಿಲ್ಲಾಧ್ಯಕ್ಷರಾದ ಡಾ.ಶಿವರಾಜ್ ಪಾಟೀಲರು ಮಾತನಾಡಿ ಅಮರೇಶ್ವರ್ ನಾಯಕ ಅವರು ರಾಜ ಮನೆತನದಿಂದ ಬಂದವರು, ಅವರು ಕಡಿಮೆ ಮಾತಾಡುವ ಸ್ವಭಾವವನ್ನು ಹೊಂದಿದವರು ಹಾಗಾಗಿ ಅವರು ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಶಾಸಕರಾಗಿ ಸಚಿವರಾಗಿ ಹಲವಾರು ಯೋಜನೆಗಳನ್ನು ತಂದವರು,ಆದರೆ ಕಾಂಗ್ರೆಸ್ ಅಭ್ಯರ್ಥಿಯಾದ ಜಿ.ಕುಮಾರ್ ನಾಯಕ್
ಅವರ ಕೊಡುಗೆ ಜಿಲ್ಲೆಗೆ ಶೂನ್ಯವಾಗಿದೆ , ಅವರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿ ಒಂದೇ ಒಂದು ಕೊಡುಗೆ ನೀಡಿಲ್ಲ. ಕೆ.ಪಿ.ಟಿ.ಸಿ.ಎಲ್ ಮುಖ್ಯಸ್ಥರಾಗಿದ್ದಾಗ ಅದರ ಭೂಸಂತ್ರಸ್ತರಿಗೆ ಹಣ ನೀಡದೆ, ಉದ್ಯೋಗ ನೀಡದೆ ವಂಚಿಸುವ ಮೂಲಕ ಜಿಲ್ಲೆಗೆ ಅನ್ಯಾಯವೆಸಿದ್ದಾರೆ ಇಂತವರನ್ನು ಜಿಲ್ಲೆಯ ಜನರು ತಿರಸ್ಕಾರ ಮಾಡಬೇಕಿದೆ .
ಇದಲ್ಲದೇ ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರಮೋದಿಜಿಯವರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಉಭಯ ಪಕ್ಷದ ಕಾರ್ಯಕರ್ತರು ಸಮನ್ವಯದಿಂದ ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಿದಾಗ ನಮ್ಮ ಅಭ್ಯರ್ಥಿ ಗೆಲ್ಲಲು ಸಾಧ್ಯವೆಂದರು. .
ರಾಜ್ಯದಲ್ಲಿ ಗ್ಯಾರೆಂಟಿಗಳಿಂದಾಗಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತಾಗಿದೆ, ದೂರದೃಷ್ಟಿಯಿಲ್ಲದ ಯೋಜನೆಗಳಿಂದ ಜನರ ಮೇಲೆ ಅಧಿಕ ತೆರಿಗೆಯ ಹೊರೆ ಬಿದ್ದಿದೆ , ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವುದು ಗ್ಯಾರೆಂಟಿ , ಈ ಚುನಾವಣೆಯ ನಂತರ ಐದು ಗ್ಯಾರೆಂಟಿಗಳು ರದ್ದಾಗುವುದು ಗ್ಯಾರೆಂಟಿ ಎಂದರು.
ಸಣ್ಣ ಪುಟ್ಟ ತಪ್ಪುಗಳಿದ್ದರೆ ಮನ್ನಿಸಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸೋಣ ಎಂದರು.
ಈ ವೇಳೆ ಮಾಜಿ ವಿಧಾನಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪರವರು ಮಾತನಾಡಿ ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೂ ಜೊತೆಗೆ ಇರುವುದರಿಂದ ಬಿಜೆಪಿಗೆ ಆನೆ ಬಲ ಬಂದಿದೆ. ರಾಯಚೂರು ನಗರದಲ್ಲಿಯೂ ಎಡರು ಪಕ್ಷಗಳು ಸಮನ್ವಯದಿಂದ ಕೆಲಸ ಮಾಡಿದ್ದೇ ಆದಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಲಿದೆ.
ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ. ಸಂಸದರಾದ ಅಮರೇಶ್ವರ್ ನಾಯಕ್ ಅವರು ಕಳೆದ 5 ವರ್ಷದಲ್ಲಿ 34 ಸಾವಿರ ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತರುವ ಮೂಲಕ ಜಿಲ್ಲೆಗೆ ಅಭಿವೃದ್ಧಿ ಸಿಂಚನ ನೀಡಿದ್ದಾರೆ. ಇದೀಗ ಮತ್ತೊಮ್ಮೆ ಅವರನ್ನು ಸಂಸದರಾಗಿ ಆಯ್ಕೆ ಮಾಡುವ ಮೂಲಕ ಪ್ರಗತಿಯಲ್ಲಿರುವ ಯೋಜನೆಗಳನ್ನು ಸಂಪೂರ್ಣ ಜಾರಿಗೊಳಿಸಲು ಅವಕಾಶ ಮಾಡಿಕೊಡಬೇಕೆಂದರು.
ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ.ವಿರುಪಾಕ್ಷಿ ಜೆಡಿಎಸ್ ಜಿಲ್ಲಾಧ್ಯಕ್ಷರು ಕಳೆದ ಐದು ವರ್ಷದಲ್ಲಿ ಸಂಸದರು ಕಾರ್ಯಕರ್ತರೊಂದಿಗೆ ಬೆರತಿಲ್ಲ ಎಂಬ ಆರೋಪವಿದೆ ಆದರೆ ಅವರ ಸ್ವಭಾವವೇ ಹಾಗೆ ಅವರು ಜಾಸ್ತಿ ಮಾತನಾಡುವುದಲ್ಲ ಜಾಸ್ತಿ ಕೆಲಸ ಮಾಡುವುದಾಗಿದೆ. ಉಭಯ ಮಹತ್ವಾಕಾಂಕ್ಷೆಯ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಯೋಜನೆ ತಂದು ಅಭಿವೃದ್ಧಿಗೆ ಮುನ್ನೋಟ ಬರೆದಿದ್ದಾರೆ, ರಾಷ್ಟ್ರೀಯ ಹೆದ್ದಾರಿ, ಯಾದಗಿರಿಗೆ ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಯೋಜನೆಗಳನ್ನು ತಂದಿದ್ದಾರೆ ಈ ನಿಟ್ಟಿನಲ್ಲಿ ನಾವೆಲ್ಲರೂ ಅವರನ್ನು ಗೆಲ್ಲಿಸುವ ಜವಬ್ದಾರಿ ಇದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಯಾದ ಜಿ.ಕುಮಾರ್ ಅವರು ರಾಯಚೂರು ಜಿಲ್ಲಾಧಿಕಾರಿಯಾಗಿ ಹಾಗೂ ಉಸ್ತುವಾರಿ ಕಾರ್ಯದರ್ಶಿಯಾಗಿ ಒಂದೇ ಒಂದು ಮಹತ್ವದ ಯೋಜನೆಯನ್ನು ತಂದಿಲ್ಲ ಜಿಲ್ಲೆಗೆ ಅವರ ಕೊಡುಗೆ ಶೂನ್ಯವಾಗಿದೆ. ಅವರು ಜಿಲ್ಲಾಧಿಕಾರಿಯಾಗಿದ್ದಾಗ
ಒಪೆಕ್ ಆಸ್ಪತ್ರೆಯನ್ನು ಖಾಸಗಿಯನ್ನು ನೀಡಿದಂತವರು, ಅಲ್ಲದೇ ವಿದ್ಯುತ್ ಉತ್ಪನ್ನ ಘಟಕಗಳನ್ನು ಹೊರಗಿನವರಿಗೆ ಗುತ್ತಿಗೆ ಕೊಡುವ ಮೂಲಕ ಜಿಲ್ಲೆಯನ್ನು ಲೂಟಿ ಮಾಡಿದಂತವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಮಾಡಿದೆ. ಈಗಾಗಿ ಸ್ಥಳೀಯರಾದ ರಾಜಾ ಅಮರೇಶ್ವರ್ ನಾಯಕ ಅವರನ್ನು ಗೆಲ್ಲಿಸಲು ಸೈನಿಕರಂತೆ ಕೆಲಸ ಮಾಡಿ ನರೇಂದ್ರ ಮೋದಿ ಪ್ರಧಾನಿಯಾಗಲು ಜಿಲ್ಲೆಯಿಂದಲೂ ಕೊಡುಗೆ ನೀಡೋಣ ಎಂದರು.
ಜೆಡಿಎಸ್ ಮುಖಂಡರಾದ ಮಹಾಂತೇಶ್ ಪಾಟೀಲ್ ಅತ್ತನೂರವರು ಮಾತನಾಡಿ ಕಳೆದ 10 ವರ್ಷದಲ್ಲಿ ಕೇಂದ್ರದಲ್ಲಿ ನರೇಂದ್ರಮೋದಿ ಸರ್ಕಾರವು ಹಲವು ಮಹತ್ವಾಕಾಂಕ್ಷೆಯ ಯೋಜನೆಗಳ ಮೂಲಕ ಜನಮಾನಸದಲ್ಲಿ ಉಳಿದಿದೆ ಈಗಾಗೀ ಮೋದಿಜಿಯವರ ಕೈ ಬಲಪಡಿಸಲು ರಾಯಚೂರು ಲೋಕಸಭೆಯ ಎನ್.ಡಿ.ಎ ಅಭ್ಯರ್ಥಿಯನ್ನಹ ಗೆಲ್ಲಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ಆಶಯದಂತೆ ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ರಾಜಾ ಅಮರೇಶ್ವರ ನಾಯಕ್ ಅವರನ್ನು ಗೆಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಡಾ.ಎಸ್.ಶಿವರಾಜ್ ಪಾಟೀಲ್ , ಜೆಡಿಎಸ್ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಿ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ಮಾಜಿ ವಿಧಾನಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪ, ಕಡಗೋಲು ಆಂಜನೇಯ್ಯ, ಜೆಡಿಎಸ್ ಮುಖಂಡರಾದ
ಉಟ್ಕೂರು ರಾಘವೇಂದ್ರ ನಗರಾಧ್ಯಕ್ಷರು , ತಿಮ್ಮಾರೆಡ್ಡಿ ಜೆಡಿಎಸ್ ನಗರಾಧ್ಯಕ್ಷರು, ನಿಕಟಪೂರ್ವ ಬಿಜೆಪಿ ಅಧ್ಯಕ್ಷರಾದ ರಾಮನಂದ ಯಾದವ್ , ರವೀಂದ್ರ ಜಲ್ದಾರ್, ಲಲಿತಾ ಕಡಗೋಲು ಮಹಿಳಾ ಜಿಲ್ಲಾಧ್ಯಕ್ಷರು, ಶಿವಶಂಕರ್ ವಕೀಲರು, ಗಾಣಧಾಳ್ ಲಕ್ಷ್ನೀಪತಿ
ಡಾ.ನಾಗರಾಜ್ ಬಾಲ್ಕಿ ಸೇರಿದಂತೆ ಉಭಯ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.