ರಾಯಚೂರು,ಜು.೧೩- ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಬಂದಿದ್ದ ಹಾಸನ ಜಿಲ್ಲೆಯ ಮೂವರು ವಿದ್ಯಾಥಿ೯ಗಳು ತುಂಬಿ ಹರಿಯುತ್ತಿರುವ ತುಂಗಭದ್ರ ನದಿಯಲ್ಲಿ ಮುಳಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಹಾಸನ ಮೂಲದ ಮೂರುಜನ ಗೆಳೆಯರು ಸ್ನಾನಕ್ಕಂದು ಇಳಿದಾಗ ನಾಪತ್ತೆತಾಗಿದ್ದಾರೆ ಎನ್ಬಲಾಗಿದೆ. ಶನಿವಾರ ಸಂಜೆ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಸಮಯದಲ್ಲಿ ಅಜಿತ್ (19), ಸಚಿನ್ (20), ಪ್ರಮೋದ್ (20) ಕಣ್ಮರೆ ಯಾಗಿದ್ದಾರೆ. ಹಾಸನದಿಂದ ಜೊತೆಯಾಗಿ ಮಂತ್ರಾಲಯಕ್ಕೆ ಬಂದಿದ್ದ ವಿದ್ಯಾಥಿ೯ಗಳು. ನಾಪತ್ತೆಯಾಗಿದ್ದು ಶೋಧ ಕಾರ್ಯಪ್ರಾರಂಭವಾಗಿದೆ .ತುಂಗಭದ್ರ ನದಿ ತುಂಬಿ ಹರಿಯುತ್ತಿರುವ ಕಾರಣ, ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನೀರಿನ ರಭಸಕ್ಕೆ ಕೊಚ್ವಿಕೊಂಡು ಹೋಗಿದ್ದು ಪತ್ತೆ ಕಾರ್ಯ ಮುಂದುವರೆದಿದೆ.