ರಾಯಚೂರು ,ಮೇ.೨೫- ನಗರದಲ್ಲಿ ಮತ್ತೋಂದು ಯುವಕನ ಕೊಲೆ ನಡೆದಿದೆ. ನಗರದ ಮಾಣಿಕನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರ ಮಧ್ಯೆ ನಡೆದ ಜಗಳದಲ್ಲಿ ಚಾಕು ಇರಿದುಶೇಕ್ ಮಹ್ಮದ ಆರೀಫ್ ಎಂಬ ಯುವಕನ ಕೊಲೆ ಮಾಡಲಾಗಿದೆ.
ಮಹ್ಮದ ಗೌಸ್‌ಮತ್ತು ಎಂ.ಡಿ.ಮುಜಾಯಿತ್ ಎಂಬ ವಿದ್ಯಾರ್ಥಿಗಳು ಸೇರಿ ಜಗಲವಾಡಿಕೊಂಡು ಚಾಕುವಿನಿಂದ ಹೊಟ್ಟೆಗೆ ತಿವಿದಿದ್ದರಿಂದವ ತೀವ್ರ ರಕ್ತಸ್ರಾವವಾಗಿ ಅರೀಫ್ ಮೃತಪಟ್ಟಿದ್ದಾನೆ. ಹಳೆ ದ್ವೇಷ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ನೇತಾಜಿನಗರ ಪಿಐ ಚಂದ್ರಪ್ಪ ಸ್ತಳಕ್ಕೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ತನಿಖೆ ಪ್ರಾರಂಭವಾಗಿದೆ. ಕೆಲಗಳ ಹಿಂದೆಯಷ್ಟೇ ಝಾಕೀರ ಹುಸೇನ ವೃತ್ತದಲ್ಲಿ ಯುವಕನ ಕೊಲೆ ನಡೆದಿತ್ತು. ಈಗ ಮತ್ತೊಂದು ಕೊಲೆ ಘನೆ ನಡೆದಿರುವದು ನಿವಾಸಿ ಗಳನ್ಬು ಬೆಚ್ಚನೆಯ ಬೀಳಿಸಿದೆ.