ಮೇಘಾ ನ್ಯೂಸ್ ಡೆಸ್ಕ್:-: ಅಪ್ರಾಪ್ತರು ಇನ್ಮುಂದೆ ‘ಇ-ಸ್ಕೂಟರ್’ ಬೈಕ್ ಓಡಿಸಬಹುದೆಂದು ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ಹೊರಬಿದ್ದಿದೆ.
ಸದ್ಯ ಅಪ್ರಾಪ್ತರು ವಾಹನ ಚಲಾಯಿಸುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ
ಆದರೆ ಅಪ್ರಾಪ್ತರು ಓಡಿಸಲು ಕೆಲ ನಿರ್ಬಂಧ ಹೇರಿದೆ. ಅದೆನೆಂದರೆ, ಅಪ್ರಾಪ್ತರು ಓಡಿಸುವ ವಾಹನಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 25 ಕಿ.ಮೀ. ಎಂದು ನಿಗದಿಪಡಿಸಲಾಗಿದೆ.
ಅಷ್ಟೆ ಅಲ್ಲದೆ ಅಪ್ರಾಪ್ತ ವಯಸ್ಕರು ಓಡಿಸುವ ವಾಹನದ ಎಂಜಿನ್ ಸಾಮರ್ಥ್ಯವನ್ನು 50 ಸಿಸಿ ಮತ್ತು ಮೋಟಾರ್ ಶಕ್ತಿಯನ್ನು ಗರಿಷ್ಠ 1,500 ವ್ಯಾಟ್‌ಗಳಿಗೆ ಸೀಮಿತಗೊಳಿಸಲು ಸಚಿವಾಲಯ ನಿರ್ಧರಿಸಿದೆ.
ಈ ಹಿನ್ನಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮೋಟಾರು ವಾಹನ ಕಾನೂನಿನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ತೀರ್ಮಾನಿಸಿದೆ.
ಸಾರ್ವಜನಿಕಕರು ಅಕ್ಟೋಬರ್ 15 ರವರೆಗೆ ಸಲಹೆಗಳನ್ನು ನೀಡಬಹುದಾಗಿದ್ದು, ಅಸ್ತಿತ್ವದಲ್ಲಿರುವ ಕಾನೂನಿಗೆ 67 ತಿದ್ದುಪಡಿಗಳನ್ನು ಸಚಿವಾಲಯ ಪ್ರಸ್ತಾಪಿಸಿದೆ. ಈ ತಿದ್ದುಪಡಿಗಳಿಗೆ ಸಂಬಂಧಿಸಿದ ಮಸೂದೆಯನ್ನು ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬಹುದು.