ರಾಯಚೂರು.ಜನರಿಂದ ಹಣ ಹೂಡಿಕೆ ಮಾಡಿಕೊಂಡು ವಂಚಿಸಿರುವ ಆರೋಪ ಎದುರಿಸುತ್ತಿರುವ ದರವೇಶ ಗ್ರೂಪ್‌ನ ನಾಲ್ಕು ಜನರನ್ನು ಅಪರಾಧವಿಭಾಗದ ಪೊಲೀಸರು ಬಂಧಿಸಿ ಸಿಐಡಿ ಒಪ್ಪಿಸಲು ಮುಂದಾಗಿದ್ದಾರೆ.
ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಕೊಂಡು ಹೂಡಿಕೆ ಹಣಕ್ಕೆ ಶೇ.೧ಂ ಬಡ್ಡಿ ಹಣ ನೀಡುವದಾಗಿ ನಂಬಿಸಿ ಸಾವಿರಾರು ಕೋಟಿ ಪಡೆದು ಈಗ ಅಸಲು ಸಹ ನೀಡದೇ ಇರುವ ಕುರಿತು ಸಾರ್ವಜನಿಕರುನೀಡಿದ ದೂರಿನ ಮೇರೆಗೆ ತನಿಖೆ ಪ್ರಾರಂಭವಾಗಿದೆ. ದರವೇಶ ಗ್ರೂಪ್‌ನ ssssಸೈಯದ್ ವಸೀಂ, ಸೈಯದ್ ಮಿಸ್ಕಿ, ಬಬ್ಲೂ, ಫಾರೂಕ್ ಎಂಬುವರನ್ನು ಬಂಧಿಸಿ ವಿಚಾರಣೆ ಪ್ರಾರಂಭಿಸಿದ್ದಾರೆ. ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಶಾಖೆಗಳನ್ನು ತೆಗೆದು ಏಜೆಂಟ್‌ರ ಮೂಲಕ ಕಳೆದೊಂದು ವರ್ಷದಿಂದ ವ್ಯವಹಾರ ನಡೆಸಲಾಗಿತ್ತು. ಜನರು ಹಣದಾಸೆಗೆ ಹಣ ಹೂಡಿ ಕೈ ಸುಟ್ಟುಕೊಂಡು ಪ್ರತಿಭಟನೆ ನಡೆಸಿದ್ದರು.
ಅಲ್ಲದೇ ದರವೇಶ ಗ್ರೂಪ್ ಮಾಲೀಕ ಮಹ್ಮದ ಸೂಜ್ ಸೇರಿದಂತೆ ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನು ಸಿಐಡಿಗೆವಹಿಸಿದ್ದರಿಂದ ಸಿಐಡಿ ವಿಭಾಗದ ಎಸ್‌ಪಿ ಪುರುಷೋತ್ತಮ ನೇತೃತ್ವದ ಅಧಿಕಾರಿಗಳ ತಂಡ ನಗರದಲ್ಲಿ ಬಿಡಾರ ಹೂಡಿ ಎಲ್ಲಾ ಆಯಾಮಗಳಲ್ಲಿಯೂ ಮಾಹಿತಿ ಸಂಗ್ರಹಿಸುತ್ತಿದೆ. ಹಣ ಹೂಡಿಕೆ ಮಾಡಿರುವ ಜನರಿಗೆ ನೀಡಿದ ಬಾಂಡ್ ಹಾಗೂ ಮರುಪಾವತಿಸುವ ಒಪ್ಪಂದ ಕುರಿತಾಗಿ ಜನರಿಗೆ ನೀಡಿದ ದಾಖಲೆಗಳ ಸಂಗ್ರಹ, ಪರಿಶೀಲನೆ ಸಹ ತಂಡ ನಡೆಸುತ್ತಿದೆ.
ಮೂಲ ಆರೋಪಿ ಮಹ್ಮದ ಸೂಜಾ ತಲೆ ಮರೆಸಿಕೊಂಡಿದ್ದು ಹುಡುಕಾಟ ನಡೆಯುತ್ತಿದೆ. ದೆಹಲಿ, ಇಂಧೋರ ಸೇರಿದಂತೆ ವಿವಿಧಡೆ ಇರುವವರನ್ನು ಪತ್ತೆ ಮಾಡಿ ಕರೆತರಲಾಗುತ್ತಿದೆ ಎಂದು ಹೇಳಲಾಗಿದೆ.
ಧರವೇಶ ಗ್ರೂಪ್‌ನಲ್ಲಿ ಹೂಡಿಕೆ ಕುರಿತಂತೆ ಸಾರ್ವಜನಿಕರಿಂದ ಪೊಲೀಸ್ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ. ಸಾರ್ವಜನಿಕರು ನೀಡಿರುವ ಮಾಹಿತಿ ಆಧಾರಿಸಿ ಮುಂದಿನ ಕ್ರಮಕ್ಕೆ ಇಲಾಖೆ ಮುಂದಾಗಿದೆ. ನಿನ್ನೇಯಷ್ಟೇ ಸಿಐಡಿ ಅಧಿಕಾರಿಗಳ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರಕರಣ ಹಸ್ತಾಂತರ ಪ್ರಕ್ರಿಯೆಗಗಳು ಪ್ರಾರಂಭಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಿಐಡಿ ತಂಡ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ವಿಚಾರಣೆ ಮುಂದುವರೆದಿದ್ದು ಮತ್ತಷ್ಟು ಮಾಹಿತಿ ಬಹಿರಂಗವಾಗಬೇಕಿದೆ. ಪ್ರಮುಖ ಆರೋಪಿ ಮಹ್ಮದ ಸೂಜಾ ಬಂಧನಕ್ಕೆ ಪೊಲೀಸ್ ತಂಡ ಮುಂಬೈಗೆ ತೆರಳಿದೆ ಎಂದು ಹೇಳಲಾಗುತ್ತಿದೆ.