ರಾಯಚೂರುಮಾ.೨೧- ಶಾಲೆಗೆ ಹೋಗಿದ್ದ ೯ ತರಗತಿ ವಿದ್ಯಾರ್ಥಿ ಹೊಂಡದಲ್ಲಿ ಮುಳುಗಿ ಸಾವಿಗೀಡಾದ ಘಟನೆಜಿಲ್ಲೆಯ ದೇವದುರ್ಗ ತಾಲೂಕಿನ ಕಾಕರ್ ಗಲ್ ಗ್ರಾಮದಲ್ಲಿ ಜರುಗಿದೆ.
ರಸ್ತೆ ಕಾಮಗಾರಿಗೆಂದು ತೋಡಿದ್ದ ಹೊಂಡದಲ್ಲಿ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಮೃತಪಟ್ಟ ವಿದ್ಯಾರ್ಥಿಯನ್ನು ಮಂಜುನಾಥ (೧೫)ಎಂದು ಗುರುತಿಸಲಾಗಿದೆ. 9ನೇ ತರಗತಿ ಓದಿತ್ತಿದ್ದ. ಶಾಲೆಯಿಂದ ಮಲವಿಸರ್ಜನೆಗೆಂದು ಹೋಗಿ ಕಾಲು ಜಾರಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಹೊಂಡದ ಬಳಿ ಬಟ್ಟೆ ಬಿದ್ದಿರುವನ್ನು ಕಂಡುಅ ನುಮಾನ ಬಂದು ಹೊಂಡದ ನೀರು ಖಾಲಿ ಮಾಡಿದರೆ ಹೊಂಡದಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಬಳಿಕ ದೇವದುರ್ಗ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಗಬ್ಬೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.