ರಾಯಚೂರು: ಮಾ.19 ಜಿಲ್ಲೆಯ ದೇವದುರ್ಗ ತಾಲೂಕಿನ ನಾಗಡದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಂಗಾರಪ್ಪನ ಕುಡಿಯುವ ನೀರಿನ ಕೆರೆಗೆ ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪಾಂಡ್ವೆ ರಾಹುಲ್ ತುಕಾರಾಮ ರವರು ಭೇಟಿ ನೀಡಿ ನೀರಿನ ಮಟ್ಟ ಪರಿಶೀಲಿಸಿದರು.
ಬಂಗಾರಪ್ಪನ ಕುಡಿಯುವ ನೀರಿನ ಕೆರೆ ಅವಲಂಬಿತ ಪ್ರದೇಶಗಳಾದ ಅತ್ತನೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ 95/96 ಡಿಸ್ಟ್ರಬೂಟರ್ ನ ಐದು ಕೆರೆಗಳು, 99ರ ಡಿಸ್ಟ್ರಬೂಟರ್ ನ ಗಣದಿನ್ನಿ ಗ್ರಾಮ ಪಂಚಾಯತ ಗಣದಿನ್ನಿ, ಹೊಕ್ರಾಣಿ ಕೆರೆ ಹಾಗೂ 99ರ ಡಿಸ್ಟ್ರಬ್ರೂಟರ್ ನ ಕಲ್ಲೂರು ಗ್ರಾಮದ 11 ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಿದ್ದು, ಈಗಾಗಲೇ ಕೆನಾಲ್ ಮುಖಾಂತರ ನೀರು ಬಿಡಲಾಗಿದೆ. ಮುಂದಿನ ಇನ್ನೂ ಎರಡು ದಿನಗಳಲ್ಲಿ ಈ ಎಲ್ಲಾ ಕೆರೆಗಳನ್ನು ಶೇ.100 ರಷ್ಟು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಿರವಾರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಮೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ 95,96,98 ಹಾಗೂ 99ರ ಡಿಸ್ಟ್ರಬೂಟರ್ ಕಾಲುವೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಲರ್ಟ್ಗಿ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಸಿರವಾರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ್ ಸ್ವಾಮಿ, ಎಇಇ, ಪಿಡಿಓ ಇತರರು ಇದ್ದರು.