ರಾಯಚೂರು. ಕಾಲುವೆಗೆ ನೀರು ಹರಿಸಿದ ವೇಳೆ ಮೈಲ್ 47ಕ್ಕೆ ನೀರು ಸಿಗದೇ ಸಂದರ್ಭದಲ್ಲಿ ಮೈಲ್ ನಂ.104ಕ್ಕೆ ನೀರು ಬರಲಿ ಸಾಧ್ಯವೇ ಇಲ್ಲ, ನಮ್ಮ ಪಾಲಿನ ನೀರನ್ನು ಬಿಡದೇ ಗೇಜ್ ನಿರ್ವಹಣೆಯಾಗದೇ ಇರುವುದರಿಂದ ರೈತರು ವಿಷದ ಬಾಟಿಲಿ ಒಡಿದು ಮನೆಗೆ ಬರುತ್ತಾರೆ, ಯಾರು ಉತ್ತರ ಕೊಡಬೇಕು ಎಂದು ಶಾಸಕ ಶಿವರಾಜ ಪಾಟೀಲ್ ಅವರು ಅಧಿಕಾರಿ ಗಳ ವಿರುದ್ಧ ಗರಂ ಆದರು.
ಬೆಂಗಳೂರಿನ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಹಿಂಗಾ ರು ಹಂಗಾಮಿನಲ್ಲಿ ಬೆಳೆದು ನಿಂತ ಬೆಳೆಗಳಿಗೆ ನೀರು ಒದಗಿಸುವ ಕುರಿತು ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿ ಹಾಯ್ದರು.
ಕುಡಿಯುವ ನೀರಿನ ಜೊತೆಗೆ ಬೆಳೆಗಳಿಗೂ ನೀರು ಹರಿಸಬೇಕು, ತುಂಗಭದ್ರಾ ಎಡದಂಡೆ ಕೊನೆ ಭಾಗದ 104ಗೆ ನೀರು ಬರಲು ಗೇಜ್ ನಿರ್ವಹಣೆ ಮಾಡಬೇಕು, ಈ ಹಿಂದೆ ಮಳೆಗಾಲದಲ್ಲಿಯೂ ನೀರು ಕೊಟ್ಟಿಲ್ಲ, ರಾಯಚೂರು ಎಂದರೆ
ಯಾಕೆ ಈ ತಾರತಮ್ಯ, ರಾಯಚೂರಿಗೆ ನೀರು ಕೊಡೊಕೆ ಆಗಲ್ಲ ಎಂದು ತೆಗೆದುಹಾಕಿ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಸಿಂಧನೂರಿನ ಮೈಲ್ 47ಕ್ಕೆ ಒಂದು ಫೀಟ್ ನೀರಿನ ವ್ಯತ್ಯಾಸವಾದರೆ 104ರಲ್ಲಿ ಅಜಗಜಾಂಗರ ವ್ಯತ್ಯಾಸವಾಗಿದೆ.
ಮೈಲ್ 47ಕ್ಕೆ ನೀರು ಬರದೇ ಇದ್ದರೆ 104ಕ್ಕೆ ಹೇಗೆ ಬರಲು ಸಾಧ್ಯ ಅಧಿಕಾರಿಗಳೇ ಉತ್ತರ ನೀಡಬೇಕು ಎಂದು ಪಟ್ಟು ಇಡಿದರು.
ಕಳೆದ 3 ತಿಂಗಳಲ್ಲಿ 2.5 ಫೀಟ್ ನೀರು ಬರುತ್ತಿಲ್ಲ, ಜನರು ಹೇಗೆ ಬದುಕಬೇಕು, ಜೊತೆಗೆ ಗಣೇಕಲ್ ಜಲಾಶಯದಲ್ಲಿ ಹೂಳು ತುಂಬಿದೆ. ಲಿಸ್ಟ್ ಇರಿಗೇಷನ್ ಆರಂಭಕ್ಕೆ ಬಿಲ್ ಬಾಕಿ ಇದೇ ಅದೂ ಈಗ ತಾನೆ ಆಗಿದೆ.
ಐಸಿಸಿ ಸಭೆಯಲ್ಲಿ ರಾಯಚೂರಿಗೆ ನೀರು ಒದಗಿಸಿಕೊಡಬೇಕು, ಹೇಗೆ ಎಂಬುದು ನೀವೇ ನಿರ್ಣಹಿಸಿ, 3500 ಕ್ಯೂಸೆಕ್ ನಮ್ಮ ಪಾಲಿನ ನೀರು ಕೊಡಲು ಮೀನಾಮೇಶ ಎಣಿಸುತ್ತೀರಿ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕೊನೆ ಭಾಗಕ್ಕೆ ನೀರು ಒದಗಿಸಿಕೊಡೋಕೆ ಆಗಿಲ್ಲ ವೆಂಸರೆ ರೈತರು ಮನೆಗೆ ವಿಷಯ ಬಾಟಲಿ ಇಡುದು ಬರ್ತಾರೆ ಯಾರು ಉತ್ತರ ನೀಡಬೇಕು, ಜಿಲ್ಲಾಧಿಕಾರಿಗಳು ಇದ್ದಾರೆ ಅವರನ್ನೂ ಕೇಳಬೇಕು, ಕುಡಿಯುವ ನೀರಿನ ಜೊತೆಗೆ ಬೆಳೆಗಳಿಗೆ ನೀರು ಒದಗಿಸಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ, ರಾಯಚೂರು ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್, ಸಚಿವ ಜಮೀರ್ ಅಹ್ಮದ್, ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ, ಗ್ರಾಮೀಣ ಶಾಸಕ ದದ್ದಲ್ ಬಸನಗೌಡ, ಶಾಸಕ ಹಿಟ್ನಾಳ, ದೇವದುರ್ಗ ಶಾಸಕಿ ಕರಿಯಮ್ಮ ನಾಯಕ, ಕಂಪ್ಲಿ ಶಾಸಕ ಗಣೇಶ, ಬಸನಗೌಡ ಬಾದರ್ಲಿ, ಗುಲಬರ್ಗಾ ಪ್ರಾದೇಶಿಕ ಆಯುಕ್ತ,
ರಾಯಚೂರು ಜಿಲ್ಲಾಧಿಕಾರಿ ನಿತೀಶ, ಕೆ, ಸೇರಿದಂತೆ ಅನೇಕರು ಇದ್ದರು.