ಸಿರವಾರ. ಪಟ್ಟಣದಲ್ಲಿ ನಕಲಿ ಮತ್ತು ಅನಧಿಕೃತವಾಗಿ ಕೀಟ ನಾಶಕ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಒಳಗೊಂಡಂತೆ ರೈತ ಸಂಘದೊಂದಿಗೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಕೀಟನಾಶಕ ಗಳನ್ನು ಜಪ್ತಿ ಮಾಡಲಾಯಿತು.
ನಕಲಿ ಕ್ರಿಮಿನಾಶಕ ಮಾರಾಟ ನಡೆಯುತ್ತಿರುವ ಕುರಿತು ರೈತರು ಕೃಷಿ ಇಲಾಖೆಗೆ ದೂರು ನೀಡಿದ್ದರು, ಇದನ್ನಾದರಿಸಿ ನಕಲಿ ಕ್ರಿಮಿನಾಶ ಸಂಗ್ರಹಿಸಿ ಇಟ್ಟಿದ್ದ ಗೋಧಾಮಗಳ ಮೇಲೆ ಕೃಷಿ ಅಧಿಕಾರಿಗಳಿಂದ ದಾಳಿ ನಡೆಸಿದರು.
ಲಕ್ಷಾಂತರ ಮೌಲ್ಯದ ಅನಧಿಕೃತವಾಗಿ ನಕಲಿ ಔಷಧಗಳನ್ನು ಇಟ್ಟಿರುವ ಗೋಧಾಮ ಪತ್ತೆಯಾಗಿದ್ದು, ಈ ಗೋದಾಮಿನಲ್ಲಿ ಇಟ್ಟಿರುವ ನಕಲಿ ಔಷಧಿಗಳು ಹನುಮಾನ್ ಟ್ರೇಡರ್ಸ್ ಎಂಬು ವರಿಗೆ ಸೇರಿದೆ ಎನ್ನಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ನಕಲಿ ಕೀಟನಾಶಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದ ಗೋಧಾಮನ್ನು ಸಹಾಯಕ ಕೃಷಿ ನಿರ್ದೇಶಕರು ಜಪ್ತಿ ಮಾಡಿಕೊಂಡು ದೂರು ದೂರು ದಾಖಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತ ಮುಖಂಡರಾದ ಕೆ ವೈ ಬಸವರಾಜ ನಾಯಕ, ಹೊಳೆಯಪ್ಪ, ರವಿಕುಮಾರ, ಬಸವರಾಜ, ಶ್ರೀಧರ, ಮತ್ತು ಹಲವು ರೈತರು ಇದ್ದರು