ರಾಯಚೂರು,ಮಾ೨೩-ಭಾನುವಾರದಂದು ನಿಗಧಿಯಾಗಿದ್ದ ಶ್ರೀ ಮಹರ್ಷಿವಾಲ್ಮೀಕಿ ವಿಶ್ವವಿದ್ಯಾಲಯ ಬಿಎ,ಬಿಕಾಂ, ಬಿಎಸ್ಸಿ,ಬಿಬಿಎಂ ಮತ್ತು ಬಿಎಸ್ ಡಬ್ಲ್ಯೂ ಪ್ರಥಮ ಸೆಮಿಸ್ಟರ ಪರೀಕ್ಷೆ ಮುಂದೂಡಲಾಗಿದೆ.
ರಾಯಚೂರು ಮತ್ತು ಯಾದಗಿರುಜಿಲ್ಲೆಗಳ ಪದವಿ ಕಾಲೆರಜುಗಳಪರೀಕ್ಷೆಯನ್ನು ತಾಂತ್ರಿಕ ಕಾರಣ ನೀಡಿ ಭಾನುವಾರ ಮದ್ಯಾನ್ಹ ೨ ರಿಂದ ಸಂಜೆ ೫ ಗಂಟೆವರೆಗೆ ನಡೆಯಬೇಕಿದ್ದ ಪರೀಕ್ಷೆ ಏಕಾಎಕಿ ರದ್ದುಗೊಂಡಿದ್ದರಿಂದ ಪರೀಕ್ಷಾರ್ಥಿಗಳು ಕೇಂದ್ರಕ್ಕೆ ಬಂದು ಮರಳುವಂತಾಯಿತು. ಪರೀಕ್ಷೆ ರದ್ದಾಗಲುಖಚಿತ ಕಾರಣ ತಿಳಿದುಬಂದಿಲ್ಲ. ಉಳಿದ ಪರೀಕ್ಷೆಗಳು ನಿಗಧಿತ ವೇಳಾಪಟ್ಟಿಯಂತೆ ನಡೆಯಲಿವೆ. ರದ್ದಾದ ಪರೀಕ್ಷಾ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟಿಸುವದಾಗಿ ವಿಶ್ವವಿದ್ಯಾಲಯ ಕುಲಸಚಿವ ಪ್ರೋ. ಜ್ಯೋತಿ ದಮ್ನು ಪ್ರಕಾಶ ಆದೇಶದಲ್ಲಿ ತಿಳಿಸಿದ್ದಾರೆ.