ರಾಯಚೂರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೃಷ್ಣ ನದಿಗೆ 1 ಟಿಎಂಸಿ ನೀರು ನಾರಾಯಣ ಜಲಾಶಯದಿಂದ ಹರಿಸಲು ಅಲೋಕೇಷನ್ ಆಗಿದೆ, ಶೀಘ್ರದಲ್ಲಿ ನೀರು ಬಿಡುಗಡೆ ಮಾಡಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿದ್ದು,
ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ಕಾಲುವೆ ಮೂಲಕ ನೀರು ಹರಿಸಿ ಶೇ. 80 ರಷ್ಟು ಕೆರೆಗಳನ್ನು ಭರ್ತಿ ಮಾಡಲಾಗಿದೆ, ಶೇ.20 ರಷ್ಟು ಕೆರೆಗಳಿಗೆ ಶೇ.50 ರಷ್ಟು ತುಂಬುತ್ತಿವೆ ಎಂದರು.
ಕೃಷ್ಣ ನದಿಯಿಂದ 1 ಟಿಎಂಸಿ ನೀರು ನಾರಾಯಣ ಜಲಾಶಯದಿಂದ ಹರಿಸಲು ಅಲೋಕೇಷನ್ ಆಗಿದೆ, ಶೀಘ್ರದಲ್ಲಿ ನೀರು ಬಿಡುಗಡೆ ಮಾಡಿಸ ಲಾಗುವುದು, ಜೊತೆಗೆ ತುಂಗಭದ್ರಾ ಮತ್ತು ಕೃಷ್ಣ ನದಿ ನೀರಿನ ಮೇಲೆ ಅವಲಂಬಿತ ವಾಗದ ಹಳ್ಳಿಗಳಲ್ಲಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಹಾಗೂ ಹೊಸ ಬೋರ್‌ವೆಲ್‌ಗಳ ಅವಶ್ಯಕತೆ ಇದ್ದಲ್ಲಿ ಕೊರೆಸಲು ಕ್ರಿಯಾ ಯೋಜನೆ ಸಿದ್ದಪಡಿಸಿ, ಪ್ರತಿ ತಾಲೂಕಿಗೆ 50 ಲಕ್ಷ ರೂ ಟಾಸ್ಕ್ ಫೋರ್ಸ್ ಹಾಗೂ ಪಂಚಾಯತ್ ಕ್ರಿಯಾ ಯೋಜನೆ ಪ್ರಸ್ತಾವನೆ ಅಪ್ರುವಲ್ ಮಾಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಖಾಸಗಿ ಬೋರ್‌ವೆಲ್ ಗಳು ಈಗೂ ಸಹ 87 ಬೋರ್‌ವೆಲ್‌ಗಳು ಮೂಲಕ ನೀರು ಪಡೆಯಲು ಸಿದ್ದಪಡಿಸಿಕೊಂ ಡಿದೆ, ನೀರಿನ ಅಭಾವ ಕಡಿಮೆಯಾದಲ್ಲಿ ಏಪ್ರಿಲ್ ನಲ್ಲಿ ಸರಿದೂಗಿಸಬಹುದು, ಮೇ ತಿಂಗಳ 2ನೇ ವಾರದಲ್ಲಿ ಮತ್ತೆ ನೀರಿನ ಅವಶ್ಯಕತೆ ಇದ್ದು, ಖಾಸಗಿ ಬೋರ್‌ಗೆಲ್ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ, ಮುಂಗಾರು ಮಳೆ ಬರೋವರೆಗೆ ನೀರಿನ ಅಭಾವ ಸರಿದೂಗಿಸಲು ಸನ್ನದ್ಧರಾಗಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ನಗರಸಭೆ ಪೌರಾಯಕ್ತರ ಚಲಪತಿ, ತಹಶಿಲ್ದಾರ್ ಸುರೇಶ ವರ್ಮಾ ಇದ್ದರು.