ರಾಯಚೂರು. ಪರವಾನಗಿ ಇಲ್ಲದೆ ಅನಧಿಕೃ ತವಾಗಿ ಮದ್ಯ ಸಾಗಿಸುತ್ತಿದ್ದು ಪೋಲಿಸ್ ತಪಾಸಣೆ ನಡೆಸಿ ವಶಪಡಿಸಿಕೊಂಡಿ ದ್ದಾರೆ.
ರಾಯಚೂರುನಿಂದ ಕರ್ನೂಲ್ ಕಡೆಗೆ ಹೋಗುತ್ತಿದ್ದ, ಅನುಮಾನಸ್ಪದ ವಾಹನವನ್ನು ತಡೆದು ನಿಲ್ಲಿಸಿ ವಾಹನವನ್ನು ಪರಿಶೀಲನೆ ಮಾಡಿ ನೋಡಲಾಗಿದೆ ಅದರಲ್ಲಿ 388 ಲೀಟರ್ ವಿಸ್ಕಿ, 70 ಲೀಟರ್ ಬಿಯರ್ ಬಾಕ್ಸ್ ಗಳಿದ್ದು, ಇವುಗಳ ಒಟ್ಟು ಮದ್ಯದ ಬೆಲೆ 1,93,248 ರೂ. ಆಗಿದೆ. ಮದ್ಯವನ್ನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗಡಿ ರಾಜ್ಯವಾದ ಆಂದ್ರಪದೇಶಕ್ಕೆ ಸಾಗಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ವಾಹನ ಮತ್ತು ಮದ್ಯವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಲೋಕಸಭಾ ಚುನಾವಣೆ ಪ್ರಯುಕ್ತ ಗಡಿ ರಾಜ್ಯ ವಾದ ಆಂದ್ರಪ್ರದೇಶಕ್ಕೆ ಹೊಂದಿಕೊಂಡಿರುವ ಅಂತರ್ ರಾಜ್ಯ ಕರ್ನೂಲ್ ಚೆಕ್‌ಪೋಸ್ಟ್‌ನಲ್ಲಿ ನಿನ್ನೆ ಸಂಜೆ ಪೋಲಿಸರು ವಾಹನ ತಪಾಸಣೆ ಮಾಡಿದ್ದಾರೆ, ಈ ಈ ವೇಳೆ ಅಕ್ರಮ ಮದ್ಯ ಸಾಗಾಣಿಕೆ ಮಾಡುತ್ತಿದ್ದು ಮದ್ಯ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿ ದ್ದಾರೆ.
ಸಿಪಿಐ ನಿಂಗಪ್ಪ, ಎನ್.ಆರ್, ಪಿಎಸ್ಐ ಪ್ರಕಾಶ, ಸಿ. ಸಿಬ್ಬಂದಿಯರಾದ ಲಕ್ಷ್ಮಣ ಸಿಹೆಚ್, ಹನುಮ ಗೌಡ, ಚಾಂದಪಾಷ ಅವರ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್.ಬಿ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್.ಆರ್.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ್, ಡಿಎಸ್‌ಪಿ ಜಿ.ಸತ್ಯನಾರಾಯಣರಾವ್ ಶ್ಲಾಘಿಸಿದ್ದಾರೆ.