Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಆರ್‌ಡಿಸಿಸಿ ಬ್ಯಾಂಕಿನಲ್ಲಿ ನಕಲಿ ಖಾತೆ ಸೃಷ್ಟಿಸಿ 2.20 ಕೋಟಿ ವರ್ಗಾವಣೆ ಮ್ಯಾನೇಜರ್ ಶಿವಪುತ್ರಪ್ಪ ಅಮಾನತು

ಆರ್‌ಡಿಸಿಸಿ ಬ್ಯಾಂಕಿನಲ್ಲಿ ನಕಲಿ ಖಾತೆ ಸೃಷ್ಟಿಸಿ 2.20 ಕೋಟಿ ವರ್ಗಾವಣೆ ಮ್ಯಾನೇಜರ್ ಶಿವಪುತ್ರಪ್ಪ ಅಮಾನತು

ರಾಯಚೂರು.ಆರ್‌ಡಿಸಿಸಿ ಬ್ಯಾಂಕಿನಲ್ಲಿ 22 ಗ್ರಾಹಕರಿಗೆ 2.20 ಕೋಟಿ ರೂಪಾಯಿ ಆಕ್ರಮವಾಗಿ ವರ್ಗಾವಣೆ ಮಾಡಿದ ಮುದ್ಗಲ್ ಪಟ್ಟಣದ ಆರ್‌ಡಿಸಿಸಿ ಬ್ಯಾಂಕಿನ ಮ್ಯಾನೇಜರ್ ಶಿವಪುತ್ರಪ್ಪ ಅವರ ವಿರುದ್ಧ ಸಹಕಾರ ಸಂಘಗಳ ಜಂಟಿ ನಿಬಂಧಕರು ವಿಚಾರಣೆ ನಡೆಸಿದ ಬಳಿಕ ಅಮಾನತ್ತು ಮಾಡಿ ಆದೇಶಿಸಿಲಾಗಿದೆ.

ಲಿಂಗಸಗೂರು ತಾಲ್ಲೂಕಿನ ಮುದ್ಗಲ್ ಪಟ್ಟಣದ ಶಾಖೆಯಲ್ಲಿ 22 ಗ್ರಾಹಕರಿಗೆ 2.20 ಕೋಟಿ ರೂಪಾಯಿ ಆಕ್ರಮ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿತ್ತು. ದೂರು ಹಿನ್ನೆಲೆಯಲ್ಲಿ ಕಲಬುರಗಿ ಸಹಕಾರ ಸಂಘಗಳ ಜಂಟಿ ನಿಬಂಧಕರು ವಿಚಾರಣೆ ನಡೆಸಲಾಗಿತ್ತು.
2017 ಜೂನ್​ನಿಂದ ಸೆಪ್ಟೆಂಬರ್ 2020 ರವರೆಗೂ ಹಂತ ಹಂತವಾಗಿ ಹಣ ವರ್ಗಾವಣೆ ನಿಯಮಗ ಉಲ್ಲಂಘಿಸಿ ನೇರವಾಗಿ ಆರ್‌ಡಿಸಿಸಿ ಬ್ಯಾಂಕ್‌ನಿಂದ ಹಣ ಪಾವತಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಬ್ಯಾಂಕ್​ನಲ್ಲಿರುವ 11 ಜನ ಸಿಬ್ಬಂದಿಯ ಐಡಿ ಬಳಸಿ, ನಕಲಿ ಖಾತೆ ಸೃಷ್ಟಿಸಿ ಹಣ ವರ್ಗಾವಣೆ ಮಾಡಿದ್ದರು,ತನಿಖೆ ನಡೆಸಿದ ಕಲಬುರಗಿ ಸಹಕಾರ ಸಂಘಗಳ ಜಂಟಿ ನಿಬಂಧಕರು ವಿಚಾರಣೆ ನಡೆಸಿದ ಬಳಿಕ ಅವ್ಯವಹಾರ ಬಯಲಾಗಿದೆ. ಈ ಹಿನ್ನೆಲೆ ಮುದಗಲ್ ಶಾಖೆ ಮ್ಯಾನೇಜರ್ ಶಿವಪುತ್ರಪ್ಪರನ್ನ ಅಮಾನತ್ತು ಮಾಡಿ ಆದೇಶಿಸಿಲಾಗಿದೆ.

Megha News