ರಾಯಚೂರು. ತಾಲ್ಲೂಕಿನ ಮಂಡಲಗೇರಾ ಗ್ರಾಮದ ರಾಯಚೂರು – ಗದ್ವಾಲ್ ಮುಖ್ಯ ರಸ್ತೆಯಲ್ಲಿರುವ ಟೀನ್ ಶೆಡ್ ಅಂಗಡಿಯನ್ನು ಕೊರೆದು ಹಣ, ಇತರೆ ವಸ್ತುಗಳು ಮತ್ತು ಮನೆಯ ಹೊರಗೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ ಘಟನೆ ನಡೆದಿದೆ.
ಸಿದ್ದಪ್ಪ ಮತ್ತು ವೆಂಕಟೇಶ ಎನ್ನುವರ ಅಂಗಡಿ ಯಲ್ಲಿ ಹಣ, ಕಿರಾಣಿ ಸಾಮಾನುಗಳನ್ನು ಮತ್ತು, ಸತ್ಯಪ್ಪ ಎಂಬುವವರ ಮನೆ ಮುಂದೆ ನಿಲ್ಲಿಸಿದ TS-33, C-5529 ನಂಬರ್ ಹೊಂದಿದ ಹೋಂಡಾ ಶೈನ್ ದ್ವಿಚಕ್ರ ವಾಹನ, ಹತ್ತಿರದ
ನಾರಾಯಣ ಎಂಬುವರ ಕಟಿಂಗ್ ಶಾಪ್ ನ್ನು ಮುರಿದು ಅದರಲ್ಲಿರುವ ಟ್ರಿಮ್ಮರ್ ಮಿಷನ್
ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮಾಹಿತಿ ತಿಳಿದ ಯಾಪಲದಿನ್ನಿ ಪಿಎಸ್ಐ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂ ಡಿದ್ದಾರೆ, ತನಿಖೆ ನಡೆಸಿದ್ದು ಆರೋಪಿಗಳನ್ನು ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಕುರಿತು ಯಾಪಲದಿನ್ನಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.