Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

State News

ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 20 ಆಂತರಿಕ ಅಂಕ: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆದೇಶ

ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 20 ಆಂತರಿಕ ಅಂಕ: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆದೇಶ

ಬೆಂಗಳೂರು: 2023-24ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಪ್ರಾಯೋಗಿ ಪರೀಕ್ಷೆ ಹೊಂದಿರದ ವಿಷಯಗಳಿಗೆ 20 ಆಂತರಿಕ ಅಂಕಗಳನ್ನು ಪರೀಕ್ಷೆಗೆ ನಿಗದಿಪಡಿಸಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಈ ಆದೇಶವನ್ನು ಹೊರಡಿಸಿದ್ದಾರೆ. ಆಂತರಿಕ ಮೌಲ್ಯ ಮಾಪನವು ಸಮಗ್ರ ಮೌಲ್ಯಮಾಪನದ ಭಾಗವಾಗಿದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳಲು ಸಹಕಾರ ನೀಡುತ್ತದೆ. ಇದು ತರಗತಿ ಕಿರುಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪರೀಕ್ಷೆಗಳ ಬಗ್ಗೆ ಗಂಭೀರತೆಯನ್ನು ಹೆಚ್ಚಿಸುತ್ತದೆ. ಆಂತರಿಕ ಮೌಲ್ಯಮಾಪನದಿಂದ ಪರೀಕ್ಷಾ ಭಯ ಹಾಗೂ ಒತ್ತಡ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಅವರಲ್ಲಿ ಕಂಡುಬರುವ ವೃತ್ತಿಪರ ಕೌಶಲಗಳು ಅವರನ್ನು ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಅವಕಾಶ ನೀಡುತ್ತದೆ.

ವಿದ್ಯಾರ್ಥಿಗಳ ಅವಲೋಕನ ನಿರಂತರವಾಗಿದ್ದು ಕಲಿಕೆಯನ್ನು ಉತ್ತಮಗೊಳಿಸಲು ಅವಕಾಶ ನೀಡುತ್ತದೆ. ಎಲ್ಲಾ ವಿಷಯಗಳಿಗೆ ಆಂತರಿಕ ಅಂಕಗಳನ್ನು ನೀಡುವ ಮಾದರಿಯನ್ನು ಅನುಸರಿಸಿದ್ದಲ್ಲಿ ಏಕರೂಪತೆಯನ್ನು ತರಬಹುದಾಗಿದೆ. ಈ ಹಿನ್ನೆಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಲ್ಲಿ 20 ಆಂತರಿಕ ಅಂಕಗಳನ್ನು ಪರೀಕ್ಷೆಗೆ ಪರಿಗಣಿಸುವ ಬಗ್ಗೆ ಸೂಕ್ತ ಆದೇಶ ಹೊರಡಿಸುವಂತೆ ಮೇಲೆ ಓದಲಾದ ಏಕ ಕಡತದಲ್ಲಿ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆರವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಮುಂದುವರೆದು, ಸದರಿ ಅಂಕಗಳನ್ನು ಆಯಾ ಉಪನ್ಯಾಸಕರು ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಿ ದಾಖಲಿಸಬೇಕಾಗುತ್ತದೆ ಹಾಗೂ 20 ಅಂಕಗಳನ್ನು ನೀಡುವ ವಿಧಾನವನ್ನು ಈ ಕೆಳಕಂಡಂತೆ ನಿರ್ಧರಿಸಲಾಗಿದೆ. ಆಂತರಿಕ ಮೌಲ್ಯಮಾಪನವನ್ನು ಒಂದನೇ ಕಿರುಪರೀಕ್ಷೆ 2ನೇ ಕಿರುಪರೀಕ್ಷೆ ಹಾಗೂ ಮಧ್ಯವಾರ್ಷಿಕ ಪೀರಕ್ಷೆಗಳಲ್ಲಿ ಗಳಿಸಿದ ಅಂಕಗಳಲ್ಲಿ ಉತ್ತಮವಾಗ ಎರಡನ್ನು 10 ಅಂಕಗಳಿಗೆ ಪರಿವರ್ತಿಸಿ ಅವುಗಳ ಸರಾಸರಿ ಅಂಕಗಳನ್ನು ನೀಡುವುದು ಎಂದಿದ್ದಾರೆ.

ಕಾಲೇಜು ಹಂತದಲ್ಲಿ ಪ್ರಾಜೆಕ್ಟ್ ಮತ್ತು ಅಸೈನ್ ಮೆಂಟ್ ಅಂಕಗಳು 10 ಆಗಿರುತ್ತದೆ. ಅವುಗಳನ್ನು ಪ್ರಾಜೆಕ್ಟ್ ಹಾಗೂ ಅಸೈನ್ ಮೆಂಟ್ ಗಳಿಗೆ ಬರವಮಿಗೆಗೆ ವಿಭಾಗಗಕ್ಕೆ 5 ಅಂಕಗಳು, ಪ್ರಸ್ತುತಪಡಿಸಿವುಕೆಗೆ 3 ಅಂಕಗಳು ಮತ್ತು ಸಂದರ್ಶನಕ್ಕೆ 2 ಅಂಕಗಳನ್ನು ಸೇರಿ 10 ಅಂಕ ನಿಗದಿಪಡಿಸಿದೆ ಎಂದಿದ್ದಾರೆ.

Megha News