ಮಸ್ಕಿ. ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿ2.02 ಲಕ್ಷ ರೂ ನಗದು 52 ದ್ವಿಚಕ್ರ ವಾಹನಗ ಳನ್ನು ವಶಪಡಿಸಿಕೊಂಡು, 16 ಜನರ ವಿರುದ್ಧ ದೂರು ದಾಖಲಿಸಿ ಕೊಂಡಿದ್ದಾರೆ.
ತಾಲ್ಲೂಕಿನ ಹಡಗಲಿ ಗ್ರಾಮದ ಸಮೀತಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದರ ಕುರಿತು ಖಚಿತ ಮಾಹಿತಿ ಮೇರೆಗೆ ಮಸ್ಕಿ ಪೋಲಿಸ್ ಠಾಣೆ ಪೋಲಿಸರು ದಾಳಿ ನಡೆಸಿದ್ದಾರೆ, ದಾಳಿ ವೇಳೆ ಸ್ಥಳೀಯಲ್ಲಿದ್ದ 2.02 ಲಕ್ಷ ರೂ ನಗದನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ 52 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ 16 ಜನರನ್ನು ಬಂಧಿಸಿದ್ದಾರೆ.
ಈ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.