ಯಾದಗಿರಿ : ಹಲ್ಲಿಬಿದ್ದ ಬಿಸಿಯೂಟ ಸೇವಿಸಿ 27 ಕ್ಕೂ ಹೆಚ್ಚು ಬಾಲಕಿಯರು ಅಸ್ವಸ್ಥಗೊಂಡ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದಿದೆ.
ನಂತರ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆ ಹಿನ್ನೆಲೆ ಪೋಷಕರು ಶಾಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಉಸ್ತುವಾರಿ ಸಚಿವ ಸಚಿವ ಶರಣಬಸ್ಸಪ್ಪ ದರ್ಶನಾಪುರ ಹಾಗೂ ಜಿಲ್ಲಾಧಿಕಾರಿ ಸ್ನಹಿಲ್ ಬೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.