ಸಿಂಧನೂರು:ಕುಡಿಯುವ ನೀರಿನ ಯೋಜನೆ ರಾಜ್ಯ ಸರ್ಕಾರದಿಂದ 30 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದರು. ತುರ್ವಿಹಾಳ ಕುಡಿಯುವ ನೀರಿನ ಕೆರೆ ಅಭಿವೃದ್ಧಿಗೆ 20 ಕೋಟಿ ರೂ. ನಗರ ಯೋಜನಾ ಪ್ರಾಧಿಕಾರ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ 6.75ಕೋಟಿ ರೂ ಹಾಗೂ ನಗರಸಭೆ ವ್ಯಾಪ್ತಿಯ ವಿವಿಧ ಕೆರೆಗಳ ಅಭಿವೃದ್ಧಿ 2 ಕೋಟಿ ಹಣ ಮಂಜೂರಾಗಿದ್ದು, ತುರ್ವಿಹಾಳದಲ್ಲಿರುವ ಬೃಹತ್ ಕುಡಿಯುವ ನೀರಿನ ಕೆರೆ ಅಭಿವೃದ್ಧಿಗೊಳಿಸಿ, ಸಿಂಧನೂರು ಪಟ್ಟಣದ ನಿವಾಸಿಗಳಿಗೆ ಪ್ರತಿ ದಿನ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮವಹಿಸಲಾಗುವುದು ಎಂದರು.
ನಗರದ ವಾರ್ಡ್ ನಂ. 20ರಿಂದ 30 ನೇ ವಾರ್ಡಿನವರೆಗೆ ಸಿಸಿ ರಸ್ತೆ ನಿರ್ಮಿಸಲು ಕೆಕೆಆರ್ ಡಿಬಿ ಯೋಜನೆಯಿಂದ 20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವೇ ಟೆಂಡರ್ ಕಾಮಗಾರಿ ಪ್ರಾರಂಭಿಸಲು ಚಾಲನೆ ನೀಡಲಾಗುವುದು ಎಂದರು.
ತಾಲ್ಲೂಕಿನ ಗೊರೇಬಾಳದಿಂದ ವೆಂಕಟೇಶ್ವರ ಕ್ಯಾಂಪವರೆಗೆ ರಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾಣಕ್ಕೆ 20 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಕೆಕೆಆರ್ ಡಿಬಿ ಮೈಕ್ರೋ ಯೋಜನೆಯಲ್ಲಿ 9 ಪ್ರೌಢ ಶಾಲೆಗಳ ಕೊಠಡಿ ನಿರ್ಮಾಣಕ್ಕೆ 12 ಕೋಟಿ ರೂ ಬಿಡುಗಡೆಯಾಗಿದೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಕಛೇರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮೇಲ್ದರ್ಜೆಗೇ ರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ಸಿಂಧನೂರು-ಕಲ್ಮಲಾ ಚತುಷ್ಪಥ ರಸ್ತೆ ಅಭಿವೃದ್ಧಿಗೆ 1636 ರೂ ಅನುದಾನವಿರಿಸಿ ಟೆಂಡರ್ ಕರೆಯಲಾಗಿದೆ ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಶಿವನ ಗೌಡ ಗೊರೇಬಾಳ, ಎನ್.ಅಮರೇಶ, ಅಶೋಕ ಉಮಲೂಟಿ, ರಂಗನಗೌಡ ಗೊರೇಬಾಳ, ಸಾಯಿರಾಮಕೃಷ್ಣ ಸೇರಿದಂತೆ ಅನೇಕರು ಇದ್ದರು.
Megha News > Local News > ನಿಗಮ ಮಂಡಳಿ ಅಧ್ಯಕ್ಷ ಬೇಕಾಗಿಲ್ಲ, ಕೊಟ್ರೂ ತಗೋಳಲ್ಲ, ಕುಡಿಯುವ ನೀರಿನ ಯೋಜನೆಗೆ 30 ಕೋಟಿ ವಿಶೇಷ ಅನುದಾನ ಮಂಜೂರು: ಬಾದರ್ಲಿ
ನಿಗಮ ಮಂಡಳಿ ಅಧ್ಯಕ್ಷ ಬೇಕಾಗಿಲ್ಲ, ಕೊಟ್ರೂ ತಗೋಳಲ್ಲ, ಕುಡಿಯುವ ನೀರಿನ ಯೋಜನೆಗೆ 30 ಕೋಟಿ ವಿಶೇಷ ಅನುದಾನ ಮಂಜೂರು: ಬಾದರ್ಲಿ
Tayappa - Raichur20/01/2024
posted on
Leave a reply