ರಾಯಚೂರು,ಮಾ.೩-ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ 7 ಗಂಟೆಗೆ ಸಿಂಧನೂರು ತಾಲ್ಲೂಕಿನ ಮುಳ್ಳೂರು ಕ್ಯಾಂಪಿನ ಬಳಿ ನಡೆದಿದೆ.
ಬಸ್ಸಾಪುರ ಗ್ರಾಮದ ಶಿವಪ್ಪ ಹುಸೇನಪ್ಪ (37), ಕೋಳಬಾಳ ಗ್ರಾಮದ ಮೌನೇಶ ಮಹಾದೇವ (20), ಚಿಕ್ಕಬೇರಗಿ ಗ್ರಾಮದ ಹನುಮೇಶ ನರಸಪ್ಪ ಮೃತರು. ಶಿವಪ್ಪ ತನ್ನ ಬೈಕ್ ಮೂಲಕ ಸಿಂಧನೂರಿನಿಂದ ಬಸ್ಸಾಪುರ ಗ್ರಾಮಕ್ಕೆ ಹೋಗುತ್ತಿದ್ದಾಗ, ಇನ್ನೊಂದು ಬೈಕ್ ನಲ್ಲಿ ಮೌನೇಶ ಹಾಗೂ ಹನುಮೇಶ ಎನ್ನುವವರು ಮಸ್ಕಿಯಿಂದ ಸಿಂಧನೂರು ಕಡೆಗೆ ಬರುತ್ತಿದ್ದಾಗ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದರೆ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಸಾವನ್ನಪ್ಪಿದ್ದಾನೆ.
ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸಾರ್ವಜನಿಕ ಆಸ್ಪತ್ರೆಗೆ ಬಿಜೆಪಿ ಮುಖಂಡ ಕೆ.ಕರಿಯಪ್ಪ ಭೇಟಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಘಟನಾ ಸ್ಥಳಕ್ಕೆ ಸಿಪಿಐ ವೀರಾರೆಡ್ಡಿ, ಗ್ರಾಮೀಣ ಠಾಣೆಯ ಪಿಎಸ್ಐ ಮಹ್ಮದ್ ಇಷಾಕ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Megha News > Crime News >
Tayappa - Raichur03/03/2025
posted on

Leave a reply