ಮಂತ್ರಾಲಯ: ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ವಿಜೃಂಭಣೆಯಿಂದ ರಥೋತ್ಸವ ನಡೆಯಿತು.
ಬೆಳಿಗ್ಗೆಯಿಂದಲೇ ರಾಯರ ಶ್ರೀಮಠದಲ್ಲಿ ಸುಪ್ರಭಾತ, ಪಂಡಿತರಿಂದ ಪಾರಾಯಾಣ ಪಠಣ ಮಾಡಲಾಯಿತು. ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಶ್ರೀರಾಯರ ಮೂಲಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ ನೆರವೇರಿಸಿ ಬಳಿಕ ತಿರುಪತಿ ತಿರುಮಲದ ದೇವರ ಶೇಷ ವಸ್ತ್ರ ರಾಯರಿಗೆ ಸಮರ್ಪಣೆ ಮಾಡಿದರು.
ಮೂಲ ರಾಮದೇವರ ಸಂಸ್ಥಾನ ಪೂಜೆ ನಡೆಸಿ ದರು, ಮಠದ ಪ್ರಾಂಗಣದಲ್ಲಿ ಚಿನ್ನದ ರಥದಲ್ಲಿ ರಾಘವೇಂದ್ರ ತೀರ್ಥರ ಬಂಗಾರದ ಮೂರ್ತಿಯ ನ್ನಿಟ್ಟು ಮೆರವಣಿಗೆ ಮಾಡಲಾಯಿತು. ಲಕ್ಷಾಂತರ ಭಕ್ತರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪುನೀತರಾದರು.