ರಾಯಚೂರು. ಇಂದಿನಿಂದ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಸಜ್ಜಾಗಿದ್ದು, ಇಂದು ಸಂಜೆ ವಿದ್ಯುಕ್ತವಾಗಿ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರ ಚಾಲನೆ ನೀಡಲಿದ್ದಾರೆ.
ಇಂದು ಸಂಜೆ 4 ಗಂಟೆಗೆ ಧ್ವಜಾರೋಹಣ ದೊಂದಿಗೆ ಚಾಲನೆ ದೊರೆಯಲಿದೆ. ಸಂಜೆ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧನ್ಯೋತ್ಸವ, ಋಗ್ವೇದ ನಿತ್ಯ ನೂತನ ಉಪಕರ್ಮ ನಡೆಯಲಿದೆ.
ಆ. 30 ರಂದು ಶಾಖೋತ್ಸವ ರಜತ ಮಂಟಪೋ ತ್ಸವ, ಯಜುರ್ವೇದ ನಿತ್ಯ ನೂತನ ಉಪಕರ್ಮ, ಆ. 31 ರಂದು ಪೂರ್ವಾ ಆರಾ ಧನಾ ರಜತ ಸಿಂಹ ವನೋತ್ಸವ, ಸೆ. 1 ರಂದು ಮಧ್ಯಾರಾ ಧನಾ ಮಹಾ ಪಂಚಾಮೃತ ಅಭಿಷೇಕ ಗಜರಾಜತ ಸ್ವರ್ಣ ರಥೋತ್ಸವ, ಸೆ. 2 ರಂದು ಉತ್ತರ ಆರಾ ಧನಾ ಪ್ರಾತಃ, ರಾಜಬೀದಿಯಲ್ಲಿ ಮಹಾ ರಥೋ ತ್ಸವ ಕಾರ್ಯಕ್ರಮ, ಸೆ. 3 ರಂದು ಸುಜ್ಞಾನೇಂದ್ರ ತೀರ್ಥರ ಆರಾಧಾನ ಮಹೋ ತ್ಸವ, ಅಶ್ವ ವನೋತ್ಸವ ಹಾಗೂ ಸೆ. 4 ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ.