ರಾಯಚೂರು. ಮದ್ದು ಗುಂಡು ತಯಾರಿಸುವ ಘಟಕಕ್ಕೆ ಪಟಾಕಿಯ ಕಿಡಿ ತಗುಲಿದ್ದರಿಂದ 40 ಜನರಿಗೆ ಗಂಭೀರವಾಗಿ ಗಾಯಗೊಂಡ ರಾಯಚೂರಿನ 3 ಜನರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಆಂದ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ತಂಗರಡೋಣಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಗ್ರಾಮದ ಚಿಂತಕಲಕುಣಿ ನಲ್ಲಾರೆಡ್ಡಿ ದೇವಸ್ಥಾನಕ್ಕೆ ನೂರಾರು ಭಕ್ತರು ದರ್ಶನಕ್ಕೆ ತೆರಳಿದ್ದು, ಈ ವೇಳೆ ಘಟನೆ ಸಂಭವಿಸಿದ್ದರಿಂದ ಸುಮಾರು 40ಕ್ಕೂ ಅಧಿಕ ಜನರು ಗಾಯಗೊಂಡಿದ್ದು 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರ ಪೈಕಿ ರಾಯ ಚೂರು ತಾಲೂಕಿನ ಮನ್ಸಲಾಪೂರ ಗ್ರಾಮದ ಗೋವಿಂದಮ್ಮ(55) ನರಸಮ್ಮ( 22) ತೇಜಸ್ವಿನಿ (20) ವರ್ಷ ಎಂದು ತಿಳಿದು ಬಂದಿದೆ.
ಗಾಯಗೊಂಡವನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮನ್ಸಲಾಪೂರ ಗ್ರಾಮದ ಈ ಮೂರು ಜನರು ಒಂದೇ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ.