ರಾಯಚೂರು.ಅಕ್ರಮ ಚಟುವಟಿಕೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದ ಕರ್ತವ್ಯ ಲೋಪದಡಿ 5 ಜನ ಪೋಲಿಸರನ್ನು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಎಂ ಪುಟ್ಟಮಾದಯ್ಯ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸಿಂಧಬೂರು ಗ್ರಾಮೀಣ ಪೊಲೀಸ್ ಠಾಣೆಯ ಬೀರಪ್ಪ, ಶರಣಪ್ಪ, ನಗರ ಪೊಲೀಸ್ ಠಾಣೆಯ ಟೋಪಣ್ಣ, ಸಾಗರ, ಸುನೀತ ಅಮಾನತು ಗೊಂಡ ಪೇದೆಗಳಾಗಿದ್ದಾರೆ.
ಸಿಂಧನೂರು ತಾಲ್ಲೂಕಿನ ಅರಗಿನಮರ ಕ್ಯಾಂಪಿನಲ್ಲಿ ಮಟ್ಕಾ, ಜೂಜಾಟ ನಡೆಯುತ್ತಿರುವ ಮಾಹಿತಿ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯ ಲೋಪದಡಿ ಸಿಂಧನೂರು ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಐವರು ಪೇದೆಗಳನ್ನು ಅಮಾನತು ಗೊಳಿಸಿದ್ದಾರೆ.
ಜಿಲ್ಲಾ ಡಿಸಿಬಿಆರ್‌ಬಿ ಸರ್ಕಲ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ನೇತೃತ್ವದ ತಂಡ ಅರಗಿನಮರ ಕ್ಯಾಂಪಿನಲ್ಲಿ ದಾಳಿ ನಡೆಸಿದಾಗ ಅಪರಾಧ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಕಂಡು ಬಂದ ಕಾರಣ ಗ್ರಾಮೀಣ ಪೊಲೀಸ್ ಠಾಣೆಯ ಸಬ್‍ಇನ್‌ಸ್ಪೆಕ್ಟರ್ ಮುಹಮ್ಮದ್ ಇಸಾಕ್ ಅವರಿಂದ ವರದಿ ಪಡೆದು ಕರ್ತವ್ಯ ಲೋಪ ಎಸಗಿದ ಆರೋಪದಡಿಯಲ್ಲಿ ಅಮಾನತು ಮಾಡಲಾಗಿದೆ.
ತಾಲ್ಲೂಕಿನ ಮೂರುಮೈಲ್ ಕ್ಯಾಂಪಿನಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಗಲಾಟೆಯಲ್ಲಿ ವ್ಯಕ್ತಿ ಯೊಬ್ಬ ಮರಣ ಹೊಂದಿದ ಆರೋಪದ ಸಂಬಂಧ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಟೋಪಣ್ಣ, ಹೆಡ್‍ಕಾನ್‌ಸ್ಟೆಬಲ್ ಗಳಾದ ಸುನೀತ ಹಾಗೂ ಸಾಗರ ಅವರನ್ನು ಕರ್ತವ್ಯಲೋಪ ಆರೋಪ ಅಡಿಯಲ್ಲಿ ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.